By: Oneindia Kannada Video Team
Published : November 29, 2017, 03:47

ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ ಇವಾಂಕಾ ಟ್ರಂಪ್ | ಕಾಂಗ್ರೆಸ್ ಗೆ ಹೊಟ್ಟೆಯುರಿ

Subscribe to Oneindia Kannada

ಮೋದಿಯನ್ನು ಇವಾಂಕಾ ಹೊಗಳಿದ್ದಕ್ಕೆ ಕಾಂಗ್ರೆಸ್ ಕಣ್ಣು ಕೆಂಪು. "ಇವಾಂಕಾ ಟ್ರಂಪ್ ಅವರು ಭಾಗವಹಿಸುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ಉನ್ನತ ಸ್ಥಾನಕ್ಕೆ ಅಗೌರವ ತಂದಿದ್ದಾರೆ" ಎಂದು ಕಾಂಗ್ರೆಸ್ ಧುರೀಣ ಆನಂದ್ ಶರ್ಮಾ ಅವರು ಟೀಕಿಸಿದ್ದಾರೆ. ಆ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇದ್ದರು. ಇದರಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸುವ ಅಗತ್ಯವೇನಿತ್ತು. ಅವರಿಗೆ ಹೊರಗಿನವರಿಂದ ಮತ್ತು ವಿದೇಶಿ ರೇಟಿಂಗ್ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದುಕೊಳ್ಳುವ ಅವಶ್ಯಕತೆಯೇನಿದೆ ಎಂದು ಅವರು ವಂಗ್ಯವಾಡಿದ್ದಾರೆ.ಚಾಯ್ ವಾಲಾನಿಂದ ಪ್ರಧಾನ ಮಂತ್ರಿಯವರೆಗೆ ನರೇಂದ್ರ ಮೋದಿಯವರ ಪಯಣ ಅಮೋಘವಾಗಿದೆ. ಅವರ ಅಡಿಯಲ್ಲಿ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಅಡಿಯಲ್ಲಿ ಎರಡೂ ದೇಶಗಳ ಬಾಂಧವ್ಯ ಗಾಢವಾಗಿರುತ್ತದೆ ಎಂದು ಟ್ರಂಪ್ ಮಗಳು ಇವಾಂಕಾ ಶ್ಲಾಘಿಸಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!