By: Oneindia Kannada Video Team
Published : January 12, 2018, 12:56

100ನೇ ಉಪಗ್ರಹವನ್ನು ಯಶಸ್ವೀಯಾಗಿ ಉಡಾವಣೆ ಮಾಡಿದ ಇಸ್ರೋ

Subscribe to Oneindia Kannada

ಸ್ವದೇಶಿ ನಿರ್ಮಿತ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಶತಕ ಬಾರಿಸಿದೆ. ಇಸ್ರೋ ತಾನೇ ನಿರ್ಮಿಸಿದ 100ನೇ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9 ಗಂಟೆ 28 ನಿಮಿಷಕ್ಕೆ 31 ಉಪಗ್ರಹಗಳನ್ನು ಹೊತ್ತು 'ಪಿಎಸ್ಎಲ್ ವಿ - ಸಿ40' ಉಡಾವಣಾ ವಾಹಕ ನಭಕ್ಕೆ ಚಿಮ್ಮಿತು. ಈ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಒಟ್ಟು 31 ಉಪಗ್ರಹಗಳಲ್ಲಿ ಭಾರತದ ಮೂರು ಮತ್ತು 28 ವಿದೇಶಿ ಉಪಗ್ರಹಗಳಿದ್ದವು. ಭಾರತದ ಮೂರು ಉಪಗ್ರಹ ಉಡಾವಣೆಯೊಂದಿಗೆ ಇಸ್ರೋ 100ನೇ ಉಪಗ್ರಹ ಉಡಾವಣೆ ಮಾಡಿದ ಸಾಧನೆ ಮಾಡಿದೆ. ಭಾರತದ ಮೂರು ಉಪಗ್ರಹಗಳಲ್ಲಿ ಹವಾಮಾನ ಸಂಬಂಧಿ ಮಾಹಿತಿ ನೀಡುವ ಕಾರ್ಟೋಸ್ಟಾಟ್-2 ಪ್ರಮುಖ ಉಪಗ್ರಹವಾಗಿದೆ. ಉಳಿದೆರಡು ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳಾಗಿವೆ. ಕಾರ್ಟೋಸ್ಟಾಟ್ 710 ಕೆಜಿ ತೂಕವಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!