By : Oneindia Kannada Video Team
Published : December 21, 2017, 04:07

ಪ್ರತ್ಯೇಕ್ ಸೌರ ಮಂಡಲದಿಂದ ಏಲಿಯನ್ಸ್ ಬಂದಿರೋದು ಪಕ್ಕಾನಾ ?

ಪ್ರಪಂಚದಾದ್ಯಂತ ಎಲ್ಲಾ ದೇಶದ ವಿಜ್ಞಾನಿಗಳಿಗೆ ಬೇರೆ ಗ್ರಹ ಹಾಗು ಪ್ರತ್ಯೇಕ ಸೌರ ಮಂಡಲದಲ್ಲಿ ನಮನ್ನ ಬಿಟ್ಟು ಬೇರೆ ಜೀವಿಗಳು ಇರಬಹುದಾ ಎಂಬ ಪ್ರಶ್ನೆ ಹಾಗು ಕುತೂಹಲ ಕಾಡುತ್ತಲೇ ಇದೆ. ಅಂತರಿಕ್ಷದಲ್ಲಿ ಇದೀಗ ಹೊಸತೊಂದು ಗುರಿತಿಗೆ ಸಿಗದ ವಸ್ತು ಹಾರಾಡೋದು ಪತ್ತೆಯಾಗಿದೆ . ಔಮುವಮುವ ಎಂಬ ಹೊಸ ಹಾರಾಡೋ ವಸ್ತು ಒಂದನ್ನು ವಿಜ್ಞಾನಿಗಳು ಬಹಳ ದಿನಗಳಿಂದ ಸೂಕ್ಷ್ಮ ವಾಗಿ ಗಮನಿಸುತ್ತಿದ್ದಾರೆ . ಅಕ್ಟೋಬರ್ ತಿಂಗಳಲ್ಲಿ ಸೂರ್ಯನ ಪಕ್ಕ ಹಾದು ಹೋದ ಈ ವಸ್ತು ಅನ್ಯ ಗ್ರಹ ಅಥವಾ ಅನ್ಯ ಸೌರ ಮನದಾಳದಿಂದ ಬಂದ ಜೀವಿಗಳ ವಾಹನವಾಗಿರಬಹುದಾ ಎಂದು ನಾಸಾ ಹಾಗು ಪ್ರಪಂಚದೆಲ್ಲೆಡೆ ಇರುವ ವಿಜ್ಞಾನಿಗಳು ಈಗ ಪರಿಶೀಲನೆ ನಡೆಸುತ್ತಿದ್ದಾರೆ . ಈ ವಸ್ತು ನಾವು ಇಲ್ಲಯವರೆಗೆ ಗಮನಿಸುರುವ ಹಾರಾಡುವ ವಸ್ತುಗಳಿಗೆಲ್ಲ ಹೋಲಿಸಿದರೆ ಬಹಳ ವಿಭಿನ್ನ . ಕಾರ್ಬನ್ ಅಂಶ ಬಹಳ ಇರುವ ಈ ವಸ್ತುವಿನಲ್ಲಿ ಜೀವಿಗಳು ಇರೋ ಸಾಧ್ಯತೆ ಬಹಳ ಹೆಚ್ಚಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!