By: Oneindia Kannada Video Team
Published : December 07, 2017, 03:33

ಅಲಮೇಲಮ್ಮನ 400 ವರ್ಷಗಳ ಶಾಪದಿಂದ ಮೈಸೂರಿನ ರಾಜವಂಶಸ್ಥರು ಮುಕ್ತರಾದ್ರಾ?

Subscribe to Oneindia Kannada

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ (ಡಿ 7) ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಯದುವಂಶಕ್ಕೆ ಗಂಡು ಮಗುವಿನ ಆಗಮನದಿಂದ ಅಂಬಾ ವಿಲಾಸ ಅರಮನೆಯಲ್ಲಿ ಸಂಭ್ರಮವೋ.. ಸಂಭ್ರಮ..ಹಾಗಾದರೆ, ಮೈಸೂರು ರಾಜ ಮನೆತನದ ಮೇಲಿದ್ದ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗಿದೆಯೇ? ಮೈಸೂರು ಅರಸರ ಇತಿಹಾಸದ ಪುಟಗಳನ್ನೊಮ್ಮೆ ಅವಲೋಕಿಸಿದರೆ, ಅಲಮೇಲಮ್ಮನ ಶಾಪದಿಂದ ಇನ್ನೂ ರಾಜಮನೆತನ ವಿಮೋಚನೆಗೊಂಡಿಲ್ಲ.ಮೈಸೂರು ರಾಜವಂಶಸ್ಥರ ಮೇಲಿರುವ ಶಾಪ ದತ್ತುಪುತ್ರರ ಮೇಲೆ ಎಂದೂ ತಟ್ಟಿಲ್ಲ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ, ಯದುವೀರ್ ಅವರನ್ನು ದತ್ತು ತೆಗೆದುಕೊಂಡು, ಮೈಸೂರು ಸಂಸ್ಥಾನದ 27ನೇ ಮಹಾರಾಜರನ್ನಾಗಿ ಪಟ್ಟಾಭಿಷೇಕ ಮಾಡಲಾಗಿತ್ತು.ಯದುವೀರ್ ದಂಪತಿಗಳಿಗೆ ಬುಧವಾರ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿಯಾದಾಗ ಮಾತ್ರ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗುತ್ತದೆ ಎನ್ನುತ್ತದೆ ಮೈಸೂರು ರಾಜಮನೆತನದ ಇತಿಹಾಸದ ಪುಟಗಳು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!