By : Oneindia Kannada Video Team
Published : February 28, 2018, 12:12

ಐ ಎನ್ ಎಕ್ಸ್ ಮೀಡಿಯಾ ಹಗರಣ : ಕಾರ್ತಿ ಚಿದಂಬರಂರನ್ನ ಅರೆಸ್ಟ್ ಮಾಡಿದ ಸಿಬಿಐ

ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಲಂಚ ತಿಂದ ಆರೋಪ ಹೊತ್ತಿರುವ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರಕಾರ ಭರ್ಜರಿ ಹೊಡೆತ ನೀಡಿದೆ. ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಲಾಗಿದೆ. ಸಿಬಿಐ ಕೈಗೊಂಡಿದ್ದ ತನಿಖೆಗೆ ಕಾರ್ತಿ ಚಿದಂಬರಂ ಅವರು ಸಹಕರಿಸಲಿಲ್ಲ ಎಂಬ ಕಾರಣದ ಮೇಲೆ ಅವರನ್ನು ಬಂಧಿಸಲಾಗಿದೆ. ಕಾರ್ತಿ ಚಿದಂಬರಂ ಅವರ ಸಿಎ ಎಸ್ ಭಾಸ್ಕರರಾಮನ್ ಅವರನ್ನು ಬಂಧಿಸಲಾಗಿದ್ದು ಅವರನ್ನು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!