By : Oneindia Kannada Video Team
Published : November 17, 2017, 01:33

ಬಿಗ್ ಬಾಸ್ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಐಟಿ ದಾಳಿ

ಬಿಗ್ ಬಾಸ್ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಐಟಿ ದಾಳಿ.ರಾಮನಗರ: ಇಲ್ಲಿನ ಬಿಡದಿ ಸಮೀಪ ಇರೋ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಪ್ರತಿಷ್ಠಿತ ಮನರಂಜನಾ ತಾಣಗಳಲ್ಲಿ ಒಂದಾಗಿರುವ ಫಿಲಂ ಸಿಟಿ ಮೇಲೆ ಈ ದಾಳಿ ನಡೆದಿದ್ದು, 5 ಕ್ಕೂ ಹೆಚ್ಚು ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಧಿಕಾರಿಗಳು ಫಿಲಂ ಸಿಟಿಯ ಸಿಇಓ ಉಪಾಸನರವರ ವಿಚಾರಣೆ ನಡೆಸಿದ್ದಾರೆ.ಸುಮಾರು 500 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಾಣ ಮಾಡಲಾಗಿದೆ. ಕನ್ನಡದ ಆರಂಭದ ಎರಡು ಬಿಗ್ ಬಾಸ್ ರಿಯಾಲಿಟಿ ಶೋ ಲೋನಾವಾಲದಲ್ಲಿ ನಡೆದಿದ್ದರೆ, ನಂತರ ಆಯೋಜನೆಗೊಂಡ ಎಲ್ಲ ಶೋಗಳು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದಿತ್ತು. ತುಂಬಾ ಧಾರಾವಾಹಿ ಗಳು ಮೂವಿ ಗಳು ನಡೆಯುವಂತ ಜಾಗ ಆಗಿದೆ, ತುಂಬ ನೂತನವಾಗಿದ್ದು ಜನಸಾಮಾನ್ಯರು ಸಹ ಕುದ್ದ ನೋಡುವಂತಹ ಜಾಗ,.ಬಿಗ್ ಬಾಸ್ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಐಟಿ ದಾಳಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!