By : Oneindia Kannada Video Team
Published : September 17, 2017, 11:19

ರೈಲು ಆಹಾರದ ಬಗ್ಗೆ ದೂರು ಕೊಡಲು ಭಾರತೀಯ ರೈಲ್ವೆಯಿಂದ ಹೊಸ ವ್ಯವಸ್ಥೆ

ರೈಲಿನಲ್ಲಿ ಪೂರೈಕೆ ಮಾಡುವ ಆಹಾರದ ಗುಣಮಟ್ಟದ ಬಗ್ಗೆ ಅಥವಾ ಆ ಆಹಾರದ ಬಗೆಗಿನ ಯಾವುದೇ ದೂರುಗಳನ್ನು ಈಗ ಪ್ರಯಾಣಿಕರು ರೈಲ್ವೆ ಇಲಾಖೆಗೆ ನೇರವಾಗಿ ತಿಳಿಸಬಹುದು. ಇದಕ್ಕಾಗ��� ಹೊಸ ವ್ಯವಸ್ಥೆಯೊಂದನ್ನು ರೈಲ್ವೆ ಇಲಾಖೆ ಸದ್ಯದಲ್ಲೇ ಜಾರಿಗೊಳಿಸಿದ್ದು, ಇದರ ಸಾಧಕ ಬಾಧಕಗಳನ್ನು ನೋಡಿದ ನಂತರ, ಇದನ್ನು ಎಲ್ಲಾ ಕಡೆಗೂ ಜಾರಿಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಕರು ಬೋಗಿಯೊಳಗೆ ಹತ್ತಿದ ಕೂಡಲೇ ಅವರಿಗೊಂದು ಟ್ಯಾಬ್ ನೀಡಲಾಗುತ್ತದೆ. ಈ ಟ್ಯಾಬ್ ನಲ್ಲಿ ರೈಲ್ವೆ ಇಲಾಖೆಗೆ ರೈಲಿನಲ್ಲಿ ನೀಡುವ ಆಹಾರದ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂಥ ತಂತ್ರಾಂಶಗಳನ್ನು ಅಳವಡಿಸಲಾಗಿರುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!