By: Oneindia Kannada Video Team
Published : November 17, 2017, 10:58

ಶ್ರೀ ಲಂಕಾ ವಿರುದ್ದ ಪರೆದಾಡಿದ ಭಾರತದ ಬ್ಯಾಟ್ಸ್ಮೆನ್

Subscribe to Oneindia Kannada

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಟಾಸ್ ವಿಳಂಬವಾಗಿತ್ತು. ನಂತರ ಟಾಸ್ ಗೆದ್ದ ಶ್ರೀಲಂಕಾ ನಾಯಕ ಚಂಡಿಮಾಲ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಸತತ 8 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ವಿಶ್ವದ ನಂ.1 ತಂಡ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೀಲಂಕಾ ಸಜ್ಜಾಗಿದೆ. ಯುಎಇನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದ ಗೆಲುವು ಕಂಡ ಶ್ರೀಲಂಕಾ ಉತ್ತಮ ಲಯದಲ್ಲಿದೆ. ಒಟ್ಟಾರೆ ಶ್ರೀ ಲಂಕಾ ವಿರುದ್ದ ಭಾರತದ ಬ್ಯಾಟ್ಸ್ಮೆನ್ ಪರೆದಾಟ ನಡೀತಿದೆ . ಭಾರತ: ಕೆಎಲ್ ರಾಹುಲ್, ಶಿಖರ್ ಧವನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಆರ್.ಅಶ್ವಿನ್/ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಉಮೇಶ್ ಯಾದವ್.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!