By: Oneindia Kannada Video Team
Published : January 22, 2018, 01:26

ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ

Subscribe to Oneindia Kannada

ದೇಶದ ಶ್ರೀಮಂತರು ಹಾಗೂ ಶ್ರೀಮಂತಿಕೆ ಬಗ್ಗೆ ಆಕ್ಸ್ ಫ್ಯಾಮ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯೊಂದು ಸಮೀಕ್ಷೆ ಬಿಡುಗಡೆ ಮಾಡಿದ್ದು, ಸಂಪತ್ತಿನ ಅಸಮಾನ ಹಂಚಿಕೆ ಬಗ್ಗೆ ಆತಂಕ ತರುವಂಥ ಅಂಕಿ-ಅಂಶಗಳನ್ನು ಬಯಲು ಮಾಡಿದೆ. ಕಳೆದ ವರ್ಷ ಶೇ 1ರಷ್ಟಿನ ಭಾರತದ ಅತಿ ಶ್ರೀಮಂತರು ದೇಶದಲ್ಲಿ ಉತ್ಪಾದನೆಯಾದ ಶೇ 73ರಷ್ಟು ಸಂಪತ್ತನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರ ಹೊರತುಪಡಿಸಿ, ಅರವತ್ತೇಳು ಕೋಟಿ ಭಾರತೀಯರ ಆಸ್ತಿ ಹೆಚ್ಚಳ ಪ್ರಮಾಣ ಶೇ ಒಂದರಷ್ಟು ಮಾತ್ರ ಆಗಿದೆ. ದಾವೋಸ್ ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಮುನ್ನ ಈ ಅಂಶವನ್ನು ಬಯಲು ಮಾಡಲಾಗಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಹೇಗಿದೆಯೋ ಅಂತ ಗಮನಿಸಿದರೆ, ಅದು ಮತ್ತೂ ಚಿಂತಾಜನಕವಾಗಿದೆ.

ಕಳೆದ ವರ್ಷ ಒಟ್ಟು ಉತ್ಪಾದನೆಯಾದ ಸಂಪತ್ತಿನಲ್ಲಿ ಶೇಕಡಾ ಎಂಬತ್ತರೆಡರಷ್ಟು ಪ್ರಮಾಣ ಶೇ ಒಂದರಷ್ಟು ಶ್ರೀಮಂತರ ಪಾಲಾಗಿದೆ.

ಜಗತ್ತಿನಾದ್ಯಂತ ಮೂನ್ನೂರಾ ಎಪ್ಪತ್ತು ಕೋಟಿ ಜನರ ಸಂಪತ್ತಿನ ಪ್ರಮಾಣದಲ್ಲಿ ಯಾವ ಏರಿಕೆಯೂ ಆಗಿಲ್ಲ ಎಂಬ ಮಾಹಿತಿ ಕೂಡ ಇದರಿಂದಲೇ ತಿಳಿದುಬರುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!