By: Oneindia Kannada Video Team
Published : November 14, 2017, 11:34

ಭಾರತೀಯ ಬ್ಯಾಟ್ಸ್ ಮನ್ ಗಳಿಗೆ 'ಮಿಸ್ಟರಿ' ಶ್ರೀಲಂಕಾದ ಈ ಸ್ಪಿನ್ನರ್!

Subscribe to Oneindia Kannada

ಶ್ರೀಲಂಕಾದ ಈ ಯುವ ಬೌಲರ್ ನೋಡಿದರೆ ತಕ್ಷಣಕ್ಕೆ ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್ ನೆನಪಿಗೆ ಬರುತ್ತಾರೆ. ಈ ಮಿಸ್ಟರಿ ಸ್ಪಿನ್ನರ್ ವಿಡಿಯೋವನ್ನು ಶ್ರೀಲಂಕಾದ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. 18 ವರ್ಷ ವಯಸ್ಸಿನ ಕೆವಿನ್ ಕೊತ್ತಿಗೊಡಾ ಅವರು ಲೆಗ್ ಸ್ಪಿನ್ನರ್ ಆಗಿದ್ದು, ಗಾಲೆ ಸಮೀಪದ ಉನಾವಾತುನಾ ಎಂಬ ಊರಿನವರಾಗಿದ್ದಾರೆ. ಕೌಲಾಲಂಪುರದಲ್ಲಿ ನಡೆದಿರುವ ಅಂಡರ್ 19 ಏಷ್ಯಾ ಟೂರ್ನಮೆಂಟ್ ನಲ್ಲಿ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ಪರ ಆಡುವ ಶಿವಿಲ್ ಕೌಶಿಕ್ ಮಾದರಿಯಲ್ಲಿ ಬೌಲಿಂಗ್ ಮಾಡುವ ಕೆವಿನ್ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಮಾಜಿ ಕ್ರಿಕೆಟರ್ ಧಮ್ಮಿಕ ಸುದರ್ಶನ ಅಭಿಪ್ರಾಯಪಟ್ಟಿದ್ದಾರೆ.ಅಫ್ಘಾನಿಸ್ತಾನದ ವಿರುದ್ಧದ ಲೀಗ್ ಪಂದ್ಯದಲ್ಲಿ 8 ಓವರ್ ಗಳಲ್ಲಿ 29/1 ಪಡೆದ ಕೆವಿನ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯವನ್ನು ಶ್ರೀಲಂಕಾ ಯುವ ತಂಡ 61ರನ್ ಗಳಿಂದ ಗೆದ್ದುಕೊಂಡಿತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!