By : Oneindia Kannada Video Team
Published : January 08, 2018, 02:32

ಹುಬ್ಬಳ್ಳಿ : ಮಗಳ ಅಮಾನವೀಯ ವರ್ತನೆ ತಾಯಿ ತಂದೆ ಬೀದಿಗೆ

ಹುಬ್ಬಳ್ಳಿಯಲ್ಲಿ ನಾಲ್ಕು ದಿನದ ಹಿಂದೆ ತಮ್ಮ ಪುತ್ರಿಯಿಂದ ಹೊರದಬ್ಬಿಸಿಕೊಂಡ ವೃದ್ಧ ಸೂರ್ಯಕಾಂತ್(90) ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜ.7ರಂದು ನಡೆದಿದೆ. ಲಕ್ಷ್ಮೇಶ್ವರ ಮೂಲದವರಾದ ದಂಪತಿ ದೇವಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಳಿ ವಯಸ್ಸಿನಲ್ಲಿ ಮಗಳೊಂದಿಗಿರಲು ಬಯಸಿದ 90 ರ ಸೂರ್ಯಕಾಂತ್ ಮತ್ತು ಅವರ ಪತ್ನಿ 80ರ ಕಮಲಮ್ಮರನ್ನು ಸ್ವಂತ ಪುತ್ರಿಯೇ ನಿರ್ದಯವಾಗಿ ಮನೆಯಿಂದ ಆಚೆ ನೂಕಿದ್ದಳು.ಇದರಿಂದ ಏನು ಮಾಡಬೇಕೆಂದೇ ತೋಚದ ದಂಪತಿ ಹುಬ್ಬಳ್ಳಿಯ ಬಸ್ಟಾಪಿನಲ್ಲೇ ಎರಡು ದಿನ ತಂಗಿದ್ದರು. ಕೊರೆಯುವ ಚಳಿಯಲ್ಲಿ ಬಸ್ ಸ್ಟಾಪಿನಲ್ಲಿಯೇ ಮಲಗಿದ್ದ ದಂಪತಿಯನ್ನು ಬಸ್ ಮತ್ತು ಆಟೋ ಚಾಲಕರು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿತ್ತು. ನಂತರ ಅವರನ್ನು ಸರ್ಕಾರಿ ವೃದ್ಧಾಶ್ರಮವೊಂದಕ್ಕೆ ಸೇರಿಸಲಾಗಿತ್ತಾದರೂ ಮನನೊಂದ ಸೂರ್ಯಕಾಂತ್ ಅವರು ಹೃದಯಾಘಾತದಿಂದ ಮರಣಹೊಂದಿದ್ದಾರೆ.ತಂದೆ ಸತ್ತ ಸುದ್ದಿಯನ್ನು ಕೇಳಿದರೂ ಯಾವ ಪ್ರತಿಕ್ರಿಯೆಯನ್ನೂ ನೀಡದ ಮಗಳು, ತಾನು ಅಂತ್ಯಸಂಸ್ಕಾರಕ್ಕೆ ಬರುವುದಿಲ್ಲ ಎಂದಿದ್ದಲ್ಲದೆ, ಶವವನ್ನು ತೆಗೆದುಕೊಂಡು ಹೋಗುವಂತೆ ವೃದ್ಧಾಶ್ರಮದವರು ಮಾಡಿದ ಮನವಿಯನ್ನೂ ತಿರಸ್ಕರಿಸಿ, ನೀವೇ ಅಂತ್ಯ ಕ್ರಿಯೆ ನೆರವೇರಿಸಿ ಎಂದು ವೃದ್ಧಾಶ್ರಮದವರಿಗೆ ಪತ್ರಮುಖೇನ ತಿಳಿಸಿದ್ದಾಳೆ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!