By : Oneindia Kannada Video Team
Published : October 27, 2017, 02:50

ಕನ್ನಡ ರಾಜ್ಯೋತ್ಸವ ಆಚರಣೆಗೆ ಭಿಕ್ಷೆ ಬೇಡಿ ಹಣ ಸಂಗ್ರಹ !

ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮಹಾನಗರ ಪಾಲಿಕೆ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ವಿನೂತವಾಗಿ ಪ್ರತಿಭಟನೆ ನಡೆಸಿದರು. ನಗರದ ಜನತಾ ಬಜಾರನಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಮಹಾನಗರ ಪಾಲಿಕೆ ಮೇಯರ್ ಡಿ ಕೆ ಚೌಹಾಣ್ ಅವರಿಗೆ ದೇಣಿಗೆ ನೀಡುವ ಮೂಲಕ ಪಾಲಿಕೆ ಕ್ರಮವನ್ನು ಖಂಡಿಸಿದರು..ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಅತಿವೃಷ್ಟಿಗೆ ರಸ್ತೆಗಳು ಹಾಳಾಗಿವೆ ಎಂಬ ನೆಪವೊಡ್ಡಿ ನಾಡ ಹಬ್ಬ ರಾಜೋತ್ಸವ ಸರಳವಾಗಿ ಆಚರಣೆ ಮಾಡುವ ಮೂಲಕ ನಾಡಿಗೆ ಅವಮಾನ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡುತ್ತಿದೆ. ಪಾಲಿಕೆ ನಿರ್ಧಾರ ಕನ್ನಡ ವಿರೋಧಿಯಾಗಿದೆ. ಯಾವ್ಯಾವುದಕ್ಕೋ ಹಣವನ್ನು ಖರ್ಚು ಮಾಡುವ ಪಾಲಿಕೆ, ರಾಜೋತ್ಸವದ ವಿಷಯದಲ್ಲಿ ಜಿಪುಣತನ ತೋರುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!