By : Oneindia Kannada Video Team
Published : January 13, 2018, 03:11

ವಿಳಾಸ ಬದಲಾಗಿದ್ದರೆ ಹೊಸ ಐಡಿ ಕಾರ್ಡ್ ಪಡೆಯುವುದು ಹೇಗೆ?

ಅಯ್ಯೋ, ಎಲೆಕ್ಷನ್ ಇನ್ನೂ ಶಾನೆ ದೂರ ಐತೆ, ಈಗ್ಲೇ ಯಾಕೆ ತಲೆ ಕೆಡಿಸಿಕೊಳ್ಳೋದು? ಚುನಾವಣೆ ಹತ್ತತ್ರ ಬರ್ತಿದ್ದಂಗೆ ಹೊಸ ಐಡಿ ಕಾರ್ಡ್ ಮಾಡಿಸಿದರಾಯ್ತು ಅಂತ ಸಾವಿರಾರು ಜನ ಮಾಗಿಯ ಚಳಿ ಕಾಯಿಸುತ್ತಿರುತ್ತಾರೆ.
ಈ ಬಗೆಯ ನಿರ್ಲಕ್ಷ್ಯದಿಂದಲೇ ಲಕ್ಷಾಂತರ ಜನ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ವಿಳಾಸ ಬದಲಾಯಿಸಲು, ಹೆಸರನ್ನು ಕಿತ್ತುಹಾಕಲು, ತಪ್ಪಾದ ಹೆಸರನ್ನು ತಿದ್ದುಪಡಿ ಮಾಡಲು ವಿಫಲರಾಗಿರುತ್ತಾರೆ ಮತ್ತು ತಮ್ಮ ಅತ್ಯಮೂಲ್ಯವಾದ ಮತವನ್ನು ಚಲಾಯಿಸಲು ಸೋತಿರುತ್ತಾರೆ.ಇದರಿಂದ ನಷ್ಟ ಆಗುವುದು ರಾಜ್ಯಕ್ಕೆ ಮಾತ್ರವಲ್ಲ, ಪ್ರತಿ ನಾಗರಿಕನಿಗೂ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಕರ್ನಾಟಕದ ನಾಗರಿಕರಾಗಿ, ಮತ ಚಲಾಯಿಸುವ ನಿಮ್ಮ ಕರ್ತವ್ಯವನ್ನು ನಿಭಾಯಿಸಿ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ್ತು ಉತ್ತಮ ಸರಕಾರ ಸ್ಥಾಪಿಸಲು ಸಹಾಯ ಮಾಡಿ.
ಈಗ ನಿಮ್ಮ ವಿಳಾಸ ಬದಲಾಗಿದ್ದರೆ, ಗುರುತಿನ ಚೀಟಿಯಲ್ಲಿ ಹೊಸ ವಿಳಾಸವನ್ನು ನಮೂದಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!