By: Oneindia Kannada Video Team
Published : December 18, 2017, 08:47

ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ 2017 : ಕ್ಷಣಗಣನೆ ಆರಂಭ

Subscribe to Oneindia Kannada

ದೇವ ಭೂಮಿ ಹಿಮಾಚಲ ಪ್ರದೇಶದಲ್ಲಿ ಹೊಸ ಇತಿಹಾಸ ನಿರ್ಮಾಣದ ನಿರೀಕ್ಷೆ ಹೊತ್ತು ಫಲಿತಾಂಶಕ್ಕಾಗಿ ಮತದಾರರು ಕಾದಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ದಾಖಲೆ ಸ್ಥಾಪನೆಯಾಗಲಿದೆ. ನವೆಂಬರ್ 9 ರಂದು ಒಂದೇ ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದೆ. ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ವೀರಭದ್ರಸಿಂಗ್(83) ಅಧಿಕಾರ ಕಳೆದುಕೊಳ್ಳಲಿದ್ದು, ಪ್ರೇಮ್ ಕುಮಾರ್ ಧುಮಾಲ್(73) ಸಿಎಂ ಆಗುವ ಅವಕಾಶಗಳಿವೆ' ಎಂದು ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿ ವರದಿ ಹೇಳಿದೆ. ಆದರೆ, ಮತದಾರರ ತೀರ್ಪು ಯಾರ ಕಡೆ ಇದೆ ಎಂಬುದು ಇಂದು ತಿಳಿಯಲಿದೆ.ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ. 2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್(83) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!