By : Oneindia Kannada Video Team
Published : December 18, 2017, 12:31

ನಟ ಸುದೀಪ್ ರನ್ನ ಭೇಟಿ ಮಾಡಿದ ಎಚ್ ಡಿ ಕುಮಾರಸ್ವಾಮಿ

ಕಿಚ್ಚ ಸುದೀಪ್ ಸದ್ಯ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಹಾಲಿವುಡ್ ನಲ್ಲೂ ಬ್ಯುಸಿ ಆಗಿರುವ ನಟ. ಬೆಳ್ಳಿತೆರೆಯಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ 'ರಿಯಾಲಿಟಿ ಶೋ' ನಡೆಸಿಕೊಡುತ್ತಾ, ಇವುಗಳ ಮಧ್ಯೆದಲ್ಲಿ ಬಿಡುವು ಮಾಡಿಕೊಂಡು 'ಸಿಸಿಎಲ್' ಪಂದ್ಯಗಳಲ್ಲೂ ಭಾಗಿಯಾಗುತ್ತಿರುವ ಹೀರೋ ಕಿಚ್ಚ ಸುದೀಪ್. ಸದಾ ಹಲವಾರು ಕೆಲಸಗಳಲ್ಲಿ ಬ್ಯುಸಿ ಆಗಿರುವ ಸುದೀಪ್ ಬಿಡುವು ಮಾಡಿಕೊಂಡು ಪರ್ಸನಲ್ ಲೈಫ್ ಹಾಗೂ ಅಭಿಮಾನಿ ಸಂಘಟನೆಗಳನ್ನೂ ನೋಡಿಕೊಳ್ಳುತ್ತಾರೆ. ಇವುಗಳ ಮಧ್ಯೆ ಕಿಚ್ಚ ರಾಜಕೀಯಕ್ಕೆ ಬರ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಕಳೆದ ವಾರ ರೈತರ ಕಾರ್ಯಕ್ರಮವೊಂದರಲ್ಲಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸುದೀಪ್ ಅವರೇ ನೇರವಾಗಿ ತಿಳಿಸಿದ್ದರು. ರಾಜಕೀಯಕ್ಕೆ ಬರಲ್ಲ ಅಂದಿದ್ದ ಸುದೀಪ್ ರನ್ನ ಮಾಜಿ ಸಿಎಂ ಕುಮಾರಸ್ವಾಮಿ ಮೀಟ್ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ನಂತರ ಕುಮಾರಸ್ವಾಮಿ ಅವರು ಸುದೀಪ್ ಅವರ ಮನೆಗೆ ಆಗಮಿಸಿದ್ದರು. ವೈಯಕ್ತಿಕ ವಿಚಾರವಾಗಿ ಸುದೀಪ್ ರನ್ನ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹೊರತು ಪಡಿಸಿ ಬೇರೆಯದ್ದೇ ವಿಷ್ಯಾ ಇದೆ ಅಂತಿದ್ದಾರೆ ಗಾಂಧಿನಗರದ ಮಂದಿ. ಹಾಗಾದ್ರೆ ಸುದೀಪ್ ಹೆಚ್ ಡಿ ಕೆ ಮೀಟಿಂಗ್ ಯಾವ ಕಾರಣಕ್ಕೆ ಆಯ್ತು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!