By : Oneindia Kannada Video Team
Published : February 06, 2018, 04:27

ಕೊಪ್ಪಳ ಕ್ಷೇತ್ರದಲ್ಲಿ ಎಚ್ ಡಿ ದೇವೇಗೌಡರವರ ಚಾಣಾಕ್ಷ ರಾಜಕೀಯ ನಡೆ

ಕೊಪ್ಫಳ ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಹೆಚ್ಚಿದೆ. ಮಾಜಿ ಶಾಸಕ, ಸಂಸದ ಎಚ್.ಜಿ.ರಾಮುಲು ಅವರು ಪುತ್ರ ಎಚ್.ಆರ್.ಶ್ರೀನಾಥ್ ಜೊತೆ ಜೆಡಿಎಸ್ ಸೇರಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಎಚ್.ಜಿ.ರಾಮುಲು ಅವರ ನಿವಾಸಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪುತ್ರನ ಜೊತೆ ಪಕ್ಷ ಸೇರಿದರು.ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಎಚ್.ಜಿ.ರಾಮುಲು ಸಕ್ರಿಯರಾಗಿದ್ದರು. ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಸೇರುವ ಮೂಲಕ ಹೊಸ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!