By: Oneindia Kannada Video Team
Published : December 18, 2017, 10:24

ಗುಜರಾತ್ ಚುನಾವಣೆ ಫಲಿತಾಂಶ 2017 : ಸಮೀಕ್ಷೆ ಪ್ರಕಾರ ಬಿಜೆಪಿ ಗೆದ್ರೆ?

Subscribe to Oneindia Kannada

'ಹಿಂದೂತ್ವದ ಪ್ರಯೋಗಶಾಲೆ' ಎಂದೇ ಕರೆಯಲಾಗಿರುವ ಗುಜರಾತ್ ನಲ್ಲಿ ಕಡೆಯಬಾರಿಗೆ ವಿಜಯದ ವಾಸನೆಯನ್ನು ಕಾಂಗ್ರೆಸ್ ಕುಡಿದಿದ್ದು 1995ರಲ್ಲಿ. ನಂತರ ಸತತ 5 ಚುನಾವಣೆಯಲ್ಲಿಯೂ ಬಿಜೆಪಿಯದ್ದೇ ಸಾರ್ವಭೌಮತ್ವ. ಈಗ 2017ರಲ್ಲಿ ಸತತ 6ನೇ ಬಾರಿಗೆ ವಿಜಯಧ್ವಜ ಹಾರಿಸಬೇಕೆಂದು ಭಾರತೀಯ ಜನತಾ ಪಕ್ಷ ಕಾತುರದಿಂದ ಎದುರುನೋಡುತ್ತಿದ್ದರೆ, ಸೋಲಿನ ಸರಪಳಿಯನ್ನು ತುಂಡರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಚಾತಕ ಪಕ್ಷಿಯಂತೆ ಕಾದುಕುಳಿತಿದೆ.ಗಮನಿಸಬೇಕಾದ ಅಂಶವೆಂದರೆ, ರಾಹುಲ್ ಗಾಂಧಿಯವರು ಮತ್ತು ನರೇಂದ್ರ ಮೋದಿಯವರು ಗುಜರಾತ್ ನಲ್ಲಿರುವ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ಆಯಾ ದೇವತೆಗಳ ಆಶೀರ್ವಾದ ಪಡೆದಿದ್ದಾರೆ. ಅಂತಿಮವಾಗಿ ಸರಕಾರ ರಚಿಸಲು ಆಶೀರ್ವಾದ ನೀಡಬೇಕಾದವರು ಮತದಾರ ದೇವರುಗಳು.ಒಂದು ಮಾಹಿತಿಯ ಪ್ರಕಾರ, ಪಟೇಲ್ ಸಮುದಾಯದ ನಾಯಕರ ಜೊತೆ ಕೈಜೋಡಿಸಿ ಕಾಂಗ್ರೆಸ್ ಭಾರೀ ಪ್ರಮಾದವೆಸಗಿದೆ. ಇದರಿಂದ ಖಚಿತವಾಗಿ ಬರಬೇಕಾಗಿದ್ದ ಮತಗಳೂ ಒಡೆದು ಅನ್ಯ ಪಕ್ಷಗಳ ಪಾಲಾಗಿವೆ. ಗುಜರಾತಿನಲ್ಲಿ ಜಾತಿ ಒಗ್ಗಟ್ಟು ಎಂದೂ ಕಂಡೇ ಇಲ್ಲ. ಹೀಗಾಗಿ ಪಟೇಲರು ಹೆಚ್ಚಾಗಿದ್ದ ಪ್ರದೇಶದಲ್ಲಿಯೂ ಕಾಂಗ್ರೆಸ್ಸಿಗೆ ಕಡಿಮೆ ಮತ ಬೀಳಬಹುದು ಎನ್ನಲಾಗುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!