By: Oneindia Kannada Video Team
Published : December 18, 2017, 05:43

ಗುಜರಾತ್ ಚುನಾವಣೆ ಫಲಿತಾಂಶ 2017 : ರಾಹುಲ್ ಗಾಂಧಿಯನ್ನ ಹೊಗಳಿದ ಶಿವಸೇನೆ

Subscribe to Oneindia Kannada

ಬಿಜೆಪಿಗೆ ಬಗಲ ಮುಳ್ಳಾಗಿರುವ ಶಿವಸೇನೆಯು ಬಿಜೆಪಿ ಪರಿಧಿಯಿಂದ ಹೊರ ಹೋಗುವ ಸ್ಪಷ್ಟ ಸೂಚನೆಗಳನ್ನು ಇತ್ತೀಚಿನ ದಿನಗಳಲ್ಲಿ ಕೊಡುತ್ತಲೇ ಬಂದಿದೆ ಅದಕ್ಕೆ ಹೊರ ಸೇರ್ಪಡೆ ಶಿವಸೇನೆಯು ರಾಹುಲ್ ಗಾಂಧಿ ಅವರನ್ನು ಹೊಗಳಿರುವುದು.ಶಿವಸೇನೆಯು ತನ್ನ ಮುಖವಾಣಿ ಪತ್ರಿಕೆ 'ಸಾಮ್ನಾ'ದಲ್ಲಿ ರಾಹುಲ್ ಗಾಂಧಿ ಅವರನ್ನು ಹೊಗಳಿ ಸಂಪಾದಕೀಯ ಬರೆದಿದ್ದು, 'ಗುಜರಾತ್ ಚುನಾವಣೆಯ ಫಲಿತಾಂಶ ಲೆಕ್ಕಿಸದೇ ರಾಹುಲ್ ಅವರು ಪ್ರಚಾರಕ್ಕೆ ಇಳಿದಿದ್ದರು, ಕಷ್ಟದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಹೆಗಲಿಗೇರಿಸಿಕೊಂಡಿದ್ದಾರೆ ಅವರಿಗೆ ಶುಭವಾಗಲಿ ಎಂಬ ಭಾವಾರ್ಥವುಳ್ಳ ಲೇಖನ ಪ್ರಕಟಿಸಿದೆ.ಮಹಾರಾಷ್ಟ್ರದ ಪ್ರಮುಖ ಪ್ರಾದೇಶಿಕ ಪಕ್ಷ ಶಿವಸೇನೆಯು ಮಹಾರಾಷ್ಟ್ರ ಬಿಜೆಪಿ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿದೆಯಾದರೂ ಬಿಜೆಪಿ ನಾಯಕತ್ವ ಹಾಗೂ ಆಡಳಿತದ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಲೆ ಬರುತ್ತಿದೆ. ಮಹಾರಾಷ್ಟ್ರದ ಸರ್ಕಾರದ ಜೊತೆಗಿನ ಮೈತ್ರಿ ಮುರಿದುಕೊಳ್ಳುವುದಾಗಿ ಶಿವಸೇನೆಯ ಯುವ ಘಟಕ ಯುವಸೇನೆಯ ರಾಜ್ಯ ಅಧ್ಯಕ್ಷ ಆದಿತ್ಯಾ ಠಾಕ್ರೆ ಅವರು ಇತ್ತೀಚೆಗಷ್ಟೆ ಹೇಳಿದ್ದರು. ಆದರ ಬೆನ್ನಲ್ಲೇ ಈಗ ರಾಹುಲ್ ಗಾಂಧಿ ಅವರನ್ನು ಹೊಗಳಿರುವುದು ನೋಡಿದರೆ ಶಿವಸೇನೆ ಕಾಂಗ್ರೆಸ್ ಸಖ್ಯಕ್ಕೆ ಹೋಗುತ್ತದೆಯೇ ಎಂಬ ಕುತುಹೂಲ ಪ್ರಾರಂಭವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!