By: Oneindia Kannada Video Team
Published : November 07, 2017, 05:58

ಗುಜರಾತ್ ಚುನಾವಣೆ 2017 : ಬಿಜೆಪಿ ನಾಯಕಿ ರೇಷ್ಮಾ ಪಟೇಲ್ ಅಶ್ಲೀಲ ಫೋಟೋಸ್ ವೈರಲ್

Subscribe to Oneindia Kannada

ಗುಜರಾತ್ ಚುನಾವಣೆಗೂ ಮುನ್ನ ಬಿಜೆಪಿ ನಾಯಕಿಯ ಅಶ್ಲೀಲ ಫೋಟೋ ವೈರಲ್. ಪಟೇದಾರ್ ಚಳುವಳಿಯ ಪ್ರಮುಖ ಮುಖಂಡ ಹಾರ್ಥಿಕ್ ಪಟೇಲ್ ಜೊತೆ ಗುರುತಿಸಿಕೊಂಡು ಇತ್ತೀಚೆಗೆ ಬಿಜೆಪಿಗೆ ನಿಷ್ಠೆ ಬದಲಿಸಿದ್ದ ಪಕ್ಷದ ನಾಯಕಿ, ರೇಷ್ಮಾ ಪಟೇಲ್ ಅವರ ಅಶ್ಲೀಲ ಫೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗುಜರಾತ್ ಚುನಾವಣೆಗೆ ಹೆಚ್ಚುಕಮ್ಮಿ ಒಂದು ತಿಂಗಳು ಇರುವ ಈ ಹೊತ್ತಿನಲ್ಲಿ, ನನ್ನ ಮತ್ತು ಪಕ್ಷದ ಇಮೇಜಿಗೆ ಧಕ್ಕೆ ತರಲು ಮಾಡಿರುವಂತಹ ಕೆಲಸವಿದು ಎಂದು ರೇಷ್ಮಾ ಪಟೇಲ್, ಪೊಲೀಸರಿಗೆ ದೂರು ನೀಡಿದ್ದಾರೆಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರನ್ನು ಹಾಳು ಮಾಡುವ ಅಭಿಯಾನ ನಡೆಯುತ್ತಿದೆ, ಸನ್ನಿ ಪಟೇಲ್ ಎನ್ನುವ ವ್ಯಕ್ತಿ ಇದಕ್ಕೆಲ್ಲಾ ಸೂತ್ರಧಾರ ಎಂದು ರೇಷ್ಮಾ ಪಟೇಲ್ ದೂರಿದ್ದು, ಪೊಲೀಸರು ಈತನ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!