By: Oneindia Kannada Video Team
Published : November 04, 2017, 06:51

ಗುಜರಾತ್ ಚುನಾವಣೆ 2017 : ಬಿಜೆಪಿ ಟಿಕೆಟ್ ಗಾಗಿ ಮುಸ್ಲಿಮರ ಪೈಪೋಟಿ

Subscribe to Oneindia Kannada

ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟ್
ಗಿಟ್ಟಿಸಲು ಮುಸ್ಲಿಂ ಸಮುದಾಯದಿಂದ ಭಾರೀ ಡಿಮಾಂಡ್ ವ್ಯಕ್ತವಾಗುತ್ತಿದೆ. ಕಳೆದ
ಚುನಾವಣೆಗಿಂತಲೂ ಈ ಬಾರಿ ಅತಿಹೆಹ್ಚು ಮುಸ್ಲಿಮರು ಟಿಕೆಟಿಗಾಗಿ ಬಿಜೆಪಿ ಬಾಗಿಲು
ಬಡಿಯುತ್ತಿದ್ದಾರೆ. 2011ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ
ನಡೆಸಿದ್ದ ಸದ್ಭಾವನಾ ಯಾತ್ರೆಯ ನಂತರ ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ
ವ್ಯಕ್ತವಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಮಟ್ಟಕ್ಕೆ ಮುಸ್ಲಿಮರಿಗೆ ಬಿಜೆಪಿ ಟಿಕೆಟ್
ನೀಡಿರಲಿಲ್ಲ.ಸದ್ಭಾವನೆ ಎನ್ನುವುದನ್ನು ಕಾರ್ಯರೂಪಕ್ಕೂ ತನ್ನಿ ಎಂದು ಬಿಜೆಪಿ
ಅಲ್ಪಸಂಖ್ಯಾತ ಮೋರ್ಚಾ, ಮುಸ್ಲಿಂ ಪ್ರಾಭಲ್ಯವಿರುವ ಗುಜರಾತಿನ ಅಸೆಂಬ್ಲಿ
ಕ್ಷೇತ್ರಗಳಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯನ್ನು
ಒತ್ತಾಯಿಸುತ್ತಿದೆ.2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 350ಕ್ಕೂ
ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಬಿಜೆಪಿ ಟಿಕೆಟಿನಿಂದ ಗೆಲುವು ಸಾಧಿಸಿದ್ದರು.
ಜಮ್ಲಾಪುರ, ಖಾಡಿಯಾ, ವೇಜಾಲ್ಪುರ, ವಾಗ್ರಾ, ಭುಜ್ ಮುಂತಾದ ಮುಸ್ಲಿಮರು ಹೆಚ್ಚಿರುವ
ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗೇ ಮನ್ನಣೆ ನೀಡಬೇಕೆಂದು ಅಲ್ಪಸಂಖ್ಯಾತ ಮೋರ್ಚಾ
ಪಟ್ಟು ಹಿಡಿದಿದೆ ಎಂದು ಟೈಮ್ಸ್ ಆಪ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!