By: Oneindia Kannada Video Team
Published : November 10, 2017, 03:59

ಗುಜರಾತ್ ಚುನಾವಣೆ 2017 : ಬಿಜೆಪಿ ಅಲರ್ಟ್! ಅಲರ್ಟ್!

Subscribe to Oneindia Kannada

ಗುಜರಾತ್ ಚುನಾವಣೆ: ಪ್ರತೀ ದಿನವು ಬಿಜೆಪಿಗೆ 'ಎಚ್ಚರಿಕೆಯ ಗಂಟೆ' ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತವರೂರು, ಮತ್ತು ಗುಜರಾತಿನ 'ಪುತ್ರ' ಪ್ರಧಾನಿ ಮೋದಿಗೆ ಭಾರೀ ಪ್ರತಿಷ್ಟೆಯ ವಿಷಯವಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯ, ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಡಿಸೆಂಬರ್ 9, 14ರಂದು ಗುಜರಾತ್ ಅಸೆಂಬ್ಲಿಗೆ ಚುನಾವಣೆ ನಡೆಯಲಿದ್ದು, ಡಿ. 18ರಂದು ಫಲಿತಾಂಶ ಪ್ರಕಟವಾಗಲಿದೆ. 22 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ದ ಅಲ್ಲಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸಹಜ. ಜೊತೆಗೆ, ಮೋದಿ ಪ್ರಧಾನಿಯಾದ ನಂತರ ಗುಜರಾತ್ ಬಿಜೆಪಿ ಘಟಕ ತನ್ನ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಳ್ಳುವಲ್ಲಿ ದಿನದಿಂದ ದಿನಕ್ಕೆ ಹಿಂದಕ್ಕೆ ಬೀಳುತ್ತಿದೆ.ಮೀಸಲಾತಿ, ಪಟೇದಾರ್ ಚಳುವಳಿಯನ್ನು ವೃತ್ತಿಪರತೆಯಿಂದ ನಿಭಾಯಿಸದೇ ಇದ್ದದ್ದು, ಪ್ರಮುಖವಾಗಿ ತಮ್ಮ ಸ್ಟ್ರಾಂಗ್ ಬೆಲ್ಟ್ ಆಗಿರುವ ಸೌರಾಷ್ಟ್ರ ಭಾಗದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವಂತಾಗಿದೆ. ಇತ್ತೀಚಿನ ಕೆಲವೊಂದು ಸಮೀಕ್ಷೆಗಳು ಹೇಳುವುದು ಕೂಡಾ ಅದನ್ನೇ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!