By : Oneindia Kannada Video Team
Published : December 08, 2017, 09:37

ಗುಜರಾತ್ ವಿಧಾನಸಭಾ ಚುನಾವಣೆ 2017 : 101 ಅಭ್ಯರ್ಥಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ

ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಮತದಾನ ಇದೇ ಡಿಸೆಂಬರ್ 14ರಂದು ನಡೆಯಲಿದೆ. ಈ ಚುನಾವಣೆಗೆ 822 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಇವರಲ್ಲಿ 101 ಜನರು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ.101ರಲ್ಲಿ 64 ಜನರು ತಮ್ಮ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಹೇಳಿಕೊಂಡಿದ್ದಾರೆ.ಇಬ್ಬರು ಅಭ್ಯರ್ಥಿಗಳ ಮೇಲೆ ಕೊಲೆ, 7 ಜನರ ಮೇಲೆ ಕೊಲೆ ಯತ್ನ, ಇನ್ನಿಬ್ಬರ ಮೇಲೆ ಅತ್ಯಾಚಾರ, ಮೂವರ ಮೇಲೆ ಕಿಡ್ನಾಪ್ ಪ್ರಕರಣಗಳಿವೆ. ಪಕ್ಷವಾರು ನೋಡಿದರೆ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದು 88ರಲ್ಲಿ 25 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಇನ್ನು ಈ ವಿಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಕೇಸರಿ ಪಕ್ಷದ 86ರಲ್ಲಿ 22 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ.ಬಿಎಸ್ಪಿಯ 74ರಲ್ಲಿ 6, ಎನ್ಸಿಪಿಯ 27ರಲ್ಲಿ 4, ಎಎಪಿಯ 7ರಲ್ಲಿ ಇಬ್ಬರು ಹಾಗೂ ಇತರ 23 ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ಇರುವುದಾಗಿ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!