By: Oneindia Kannada Video Team
Published : January 31, 2017, 02:54

ನಿಖರ ಗುರಿ ತಲುಪಬಲ್ಲ ಗೈಡೆಡ್ ಪಿನಾಕ ರಾಕೆಟ್ ಉಡಾವಣಾ ಪರೀಕ್ಷೆಯಲ್ಲಿ ಭಾರತ ಯಶಸ್ವಿ

Subscribe to Oneindia Kannada

ನಿಖರ ಗುರಿ ತಲುಪುವ ಸಾಮಥ್ರ್ಯದ ಗೈಡೆಡ್ ಪಿನಾಕ ರಾಕೆಟ್ ಉಡಾವಣಾ ಪರೀಕ್ಷೆಯಲ್ಲಿ ಭಾರತ ಯಶಸ್ವಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ. ಒಡಿಶಾದ ಚಂಡಿಪುರ್‍ನ ಸಮಗ್ರ ಪರೀಕ್ಷಾ ವಲಯ-ಐಟಿಆರ್‍ನಿಂದ ಪಿನಾಕ ರಾಕೆಟ್ ಹೊಸ ನಮೂನೆ ಉಡಾವಣೆ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಾಧನೆಗಾಗಿ ವಿಜ್ಞಾನಿಗಳು, ಉದ್ಯಮ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಅಧ್ಯಕ್ಷ ಎಸ್.ಕ್ರಿಸ್ಟೋಫರ್ ಅಭಿನಂದಿಸಿದ್ದಾರೆ. ವಾಯುಮಾರ್ಗ, ಮಾರ್ಗದರ್ಶನ ಮತ್ತು ನಿಯಂತ್ರಣ ಕಿಟ್‍ಗಳೊಂದಿಗೆ ಸಜ್ಜಾ ಗಿರುವ ಗೈಡೆಡ್ ಪಿನಾಕ ರಾಕೆಟ್ ಮಾರ್ಪಡಿತ ನಮೂನೆಯಾಗಿದೆ. ಇದು ನಿಖರ ಗುರಿ ತಲುಪಲು ಸಮರ್ಥವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!