By: Oneindia Kannada Video Team
Published : November 10, 2017, 04:22

ಸುಮಾರು 177 ದಿನಬಳಕೆ ಸಾಮಗ್ರಿಗಳ ಮೇಲೆ ಜಿ ಎಸ್ ಟಿ ತೆರಿಗೆ ದರ 28% ಇಂದ 18% ಗೆ ಇಳಿಕೆ

Subscribe to Oneindia Kannada

ಗ್ರಾಹಕರೇ ಗಮನಿಸಿ! 177 ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆ ನಡೆದಿದ್ದು, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆಯಾಗಿದೆ. 50 ಸಾಮಾಗ್ರಿಗಳಿಗೆ ಮಾತ್ರ ಶೇ 28ರಷ್ಟು ತೆರಿಗೆ ನಿಗದಿ ಮಾಡಿದೆ. ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್‌ಟಿ ಮಂಡಳಿಯ ಸಭೆ ನಡೆಸಲಾಗಿದೆ. ದಿನ ಬಳಕೆಯಲ್ಲಿರುವ ಅಂದಾಜು 177 ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಇಳಿಸಲಾಗಿದೆ.ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗುವುದು ಎಂದು ಬಿಹಾರದ ಡಿಸಿಎಂ ಹಾಗೂ ಜಿಎಸ್‌ಟಿಎನ್‌ (Goods and Services Tax Network ) ಸಮಿತಿಯ ಮುಖ್ಯಸ್ಥ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!