By : Oneindia Kannada Video Team
Published : November 15, 2017, 09:42

ಶಿವಣ್ಣನ ಮನವಿಗೆ ಸರ್ಕಾರದ ಸ್ಪಂದನೆ

ಹೆಬ್ಬಾಳ ಸಮೀಪದ ಮಾನ್ಯತಾ ಟೆಕ್ ಪಾರ್ಕ್ ಬಳಿ ಸಂಚಾರ ದಟ್ಟಣೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ನಟ ಶಿವರಾಜ್ ಕುಮಾರ್ ಅವರು ಮಾಡಿಕೊಂಡ ಮನವಿಗೆ ತಕ್ಷಣವೇ ಸರ್ಕಾರ ಸ್ಪಂದಿಸಿದೆ. ಮೂರು ದಿನಗಳ ಹಿಂದೆ ನಟ ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ, ಮಾನ್ಯತಾ ಟೆಕ್ ಪಾರ್ಕ್ ಸಮೀಪದ ನಿವಾಸಗಳ ಅಸೋಸಿಯೇಷನ್ ಪರವಾಗಿ ಟ್ರಾಫಿಕ್ ಸಮಸ್ಯೆ ಬಗ್ಗೆ ವಿವರಿಸಿದ್ದರು.ಇದಾದ ಬಳಿಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿನ ಸಮಸ್ಯೆಯನ್ನು ಪರಿಶೀಲಿಸಿದ್ದರು. ಈಗ ನಗರ ಟ್ರಾಫಿಕ್ ಪೊಲೀಸರು, ಈ ಭಾಗದಲ್ಲಿ ಏಕಮುಖ ಸಂಚಾರವನ್ನು ನಿಗದಿ ಪಡಿಸಿದ್ದಾರೆ. 5.30 pm ನಿಂದ 8.30pm ತನಕ ಒನ್ ವೇ ಟ್ರಾಫಿಕ್ ಜಾರಿಯಲ್ಲಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!