By: Oneindia Kannada Video Team
Published : January 02, 2018, 05:44

ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

Subscribe to Oneindia Kannada

ನವದೆಹಲಿ, ಜನವರಿ 02: ಅಪನಗದೀಕರಣ ಜಾರಿಗೊಂಡ ಬಳಿಕ ಡಿಜಿಟಲ್ ಇಂಡಿಯಾ ಸೇವೆ, ನಗದು ರಹಿತ ವಹಿವಾಟಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.ಡೆಬಿಟ್ ಕಾರ್ಡ್ ಬಳಕೆದಾರರು, ಸಣ್ಣವರ್ತಕರಿಗೆ ಹೇರಿಕೆ ಎನಿಸುತ್ತಿದ್ದ ಮರ್ಚಂಟ್ ಡಿಸ್ಕೌಂಟ್ ರೇಟ್(ಎಂಡಿಆರ್) ಮೇಲೆ ಸರ್ಕಾರ ಕಡಿವಾಣ ಹಾಕಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಾಗ ಒನ್ಇಂಡಿಯಾ ಕನ್ನಡದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.ಇದರಂತೆ, ಜನವರಿ 01, 2018ರಿಂದಲೇ ಹೊಸ ನಿಯಮ ಜಾರಿಗೆ ಬರಲಿದ್ದು, 2000 ರುಪಾಯಿ ತನಕದ ನಗದು ರಹಿತ ಕಾರ್ಡ್ ಬಳಕೆ ವಹಿವಾಟಿನ ಮೇಲೆ ಎಂಡಿಆರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವಿತ್ತ ಸಚಿವಾಲಯ ಸೋಮವಾರದಂದು ಪ್ರಕಟಿಸಿದೆ.ಡೆಬಿಟ್ ಕಾರ್ಡ್, BHIM ಅಪ್ಲಿಕೇಷನ್ ಅಥವಾ ಯಾವುದೇ ಆಧಾರ್ ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ 2,000 ರುಪಾಯಿ ವರೆಗಿನ ವಹಿವಾಟಿನ ಮೇಲೆ ಯಾವುದೇ ಶುಲ್ಕ ಇರುವುದಿಲ್ಲ .ಇದರಿಂದ ಸರ್ಕಾರದ ಬೊಕ್ಕಸಕ್ಕೆ 2,512 ಕೋಟಿ ರು ಹೊರೆ ಬೀಳಲಿದೆ.ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರವೇ ವರ್ತಕರ ರಿಯಾಯಿತಿ ದರವನ್ನು (ಎಂಡಿಆರ್‌) ಪಾವತಿ ಮಾಡಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!