By : Oneindia Kannada Video Team
Published : December 08, 2017, 03:39

ಗೂಗಲ್ ಮ್ಯಾಪ್ಸ್ ಹೊಸ ಅಪ್ಡೇಟ್ ನಿಂದ ಕನ್ನಡಿಗರಿಗೆ ಬಹಳ ಉಪಯೋಗ

ಕನ್ನಡಿಗರಿಗೆ ಹಾಗು ದ್ವಿಚಕ್ರ ವಾಹನ ಸವಾರರಿಗೆ ಗೂಗಲ್ ಸಿಹಿ ಸುದ್ದಿ ಕೊಟ್ಟಿದೆ . ಜಿಪಿಎಸ್ ಆಧಾರದ ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕ್ಷೆಯಲ್ಲಿ ದಾರಿ ತೋರುವ ತಂತ್ರಾಂಶಗಳು ಹೆಚ್ಚಾಗಿ ವಾಹನ ಸವಾರರು ಪ್ರತಿನಿತ್ಯ ಬಳಸುತ್ತಿದ್ದಾರೆ. ವಾಹನ ಸವಾರರಿಗೆ ತಂತ್ರಜ್ಞಾನದ ಮೂಲಕ ಇನ್ನಷ್ಟು ಸುಲಭ ಮಾರ್ಗವನ್ನು ಗೂಗಲ್ ಇಂಡಿಯಾ ಪರಿಚಯಿಸಿದೆ. ಈ ಸೌಲಭ್ಯಗಳು ಕನ್ನಡದಲ್ಲೂ ಲಭ್ಯವಿದೆ. ಈ ಪೈಕಿ ಕನ್ನಡ ಬಳಸುವ ವೇಜ್ ಆಪ್ ಬಿಟ್ಟರೆ ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ . ಹೊಸ ಫೀಚರ್ ಒಂದನ್ನು ಬಳಕೆದಾರರಿಗೆ ನೀಡುತ್ತಿದೆ.Google Maps (v9.67.1) ಬಳಸುತ್ತಿದ್ದರೆ, ಟು-ವ್ಹೀಲರ್ ಮೋಡ್ ಹೊಸದಾಗಿ ಕಾಣಿಸಿಕೊಳ್ಳುತ್ತಿದೆ.. ಕಾರ್, ಫೂಟ್ ಹಾಗೂ ಟ್ರೈನ್ ಜತೆಯಲ್ಲಿ ಈಗ ದ್ವಿಚಕ್ರವಾಹನ ಸವಾರರಿಗೆ ದಾರಿ ತೋರಲು ಗೂಗಲ್ ಮುಂದಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!