By : Oneindia Kannada Video Team
Published : December 07, 2017, 12:14

ಕಲುಶಿತಗೊಂಡಿದ್ದ ಬೆಂಗಳೂರು ಕುಂದಲಹಳ್ಳಿಕೆರೆಗೆ ಮರುಜೀವ

ಬೆಂಗಳೂರು, ಡಿಸೆಂಬರ್ 07 : ಕಲುಷಿತಗೊಂಡಿದ್ದ ಬೆಂಗಳೂರಿನ ಕುಂದಲಹಳ್ಳಿ ಕೆರೆಯನ್ನು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾದ ಜನರಲ್ ಎಲೆಕ್ಟ್ರಿಕ್ (ಜಿಇ) ಯುನೈಟೆಡ್ ವೇ ಬೆಂಗಳೂರು ಎಂಬ ಎನ್ ಜಿ ಒ ನೆರವಿನೊಂದಿಗೆ ಪುನರುಜ್ಜೀವನಗೊಳಿಸಿದೆ.ವೈಟ್ ಫೀಲ್ಡ್ ಬಳಿ ಇರುವ ಕುಂದಲಹಳ್ಳಿ ಕೆರೆಯಲ್ಲಿದ್ದ ತುಂಬಿಹೋಗಿದ್ದ ತ್ಯಾಜ್ಯವನ್ನು ತೆಗೆದು ಹೊಸದಾಗಿ ಶುದ್ಧ ನೀರು ತುಂಬಲು ಕೆರೆಯ ದಡದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಇ ಇಂಡಿಯಾ ಟೆಕ್ನಾಲಜಿ ಸೆಂಟರ್ ನ ಮುಖ್ಯ ಕಾರ್ಯನುರ್ವಾಹಕ ಮನಿಜ್ ಮಖಿಜಾ ತಿಳಿಸಿದರು.ಇದರಿಂದ ಕುಂದಲಹಳ್ಳಿ ಕೆರೆಗೆ ಮರುಜೀವ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸುಮಾರು 30 ಎಕರೆ ಪ್ರದೇಶದಲ್ಲಿ ಹರಡಿರುವ ಕುಂದಲಹಳ್ಳಿ ಕೆರೆಯಲ್ಲಿ ಅರ್ಧದಷ್ಟು ಚರಂಡಿ ನೀರು ಹಾಗೂ ಕೊಳಚೆ ನೀರಿನಿಂದ ಸಂಪೂರ್ಣವಾಗಿ ಹುದಿಗಿಹೋಗಿತ್ತು. ಸಂಸ್ಥೆಯ ಸ್ವಯಂ ಸೇವಕರು ನಿರಂತರ ಆರು ತಿಂಗಳ ಕಾಲ ಕೆರೆಯನ್ನು ಸ್ವಚ್ಛಗೊಳಿಸಿ ಕೆರೆಯನ್ನು ಸಂಪೂರ್ಣ ಪುನಶ್ಚೇತನಗಿಳಿಸಲು ಶ್ರಮಿಸಿದ್ದಾರೆ ಎನ್ನುತ್ತಾರೆ ಮಖಿಜಾ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!