By : Oneindia Kannada Video Team
Published : December 06, 2017, 10:22

ಗೌರಿ ಲಂಕೇಶ್‌ ಹತ್ಯೆ: ಓರ್ವ ಶಾರ್ಪ್ ಶೂಟರ್ ಬಂಧನ

ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್ ನ ಶಾರ್ಪ್ ಶೂಟರ್ ತಾಹೀರ್ ಹುಸೇನ್‌ ಅಲಿಯಾಸ್ ಅನೂಪ್‌ ಗೌಡನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ.ರಾಜ್ಯದಲ್ಲಿ ನಾಡಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪದಡಿ ಅನೂಪ್‌ ಗೌಡನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ 7.65 ಎಂ.ಎಂನ ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು ಪತ್ತೆಯಾಗಿವೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್ ಬಳಕೆಯಾಗಿತ್ತು. ಈ ಕಾರಣದಿಂದ ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಕೂಡ ತಾಹಿರ್ ಹುಸೇನ್‌ನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸಲಿದೆ. 2017ರ ಫೆಬ್ರವರಿ 2ರಂದು ಬೆಳಗಾವಿ ಪೊಲೀಸರು ತಾಹಿರ್ ಹುಸೇನ್‌ ನನ್ನು ಬಂಧಿಸಿದ್ದರು.ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ. ಇದೀಗ ಮತ್ತೆ ಅಕ್ರಮ ಶಸ್ತ್ರಾಸ್ತ್ರಗಳ ಸಮೇತ ಸಿಕ್ಕಿಬಿದ್ದಿದ್ದಾನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!