By: Oneindia Kannada Video Team
Published : January 16, 2018, 06:01

ಬೆಂಗಳೂರಿನಲ್ಲಿ ಮಹಿಳೆಯರ ಗುಂಪೊಂದು ಮಾಂಸದಂಗಡಿಗೆ ನುಗ್ಗಿ ಹಣವನ್ನು ದೋಚಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ

Subscribe to Oneindia Kannada

ಕಳ್ಳರ ಒಂದು ಗುಂಪು ಭಿಕ್ಷುಕರ ಹಾಗೆ ವೇಷ ಧರಿಸಿ ಮಾಂಸದಂಗಡಿಯನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಕಳ್ಳತನ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯದಲ್ಲಿ ಇಬ್ಬರು ಮಹಿಳೆಯರು ಅಂಗಡಿಯಲ್ಲಿ ಕೆಲಸ ಮಾಡುವವರ ಗಮನವನ್ನು ಬೇರೆಡೆಗೆ ಸೆಳೆದು . ಒಬ್ಬ ಬಾಲಕಿ ಕೈಯಲ್ಲಿ ಹಣವನ್ನು ದೋಚಿಸುತ್ತಾರೆ .

ಘಟನೆ ಆರ್ ಟಿ ನಗರದ ಮಾಂಸದಂಗಡಿಯಲ್ಲಿ ಸೋಮುವಾರ ಹಾಡು ಹಗಲೇ ಸುಮಾರು ೧೧ ೩೦ ಕ್ಕೆ ನಡೆದಿದೆ . ಇಡೀ ಘಟನೆ ಕೌಂಟರ್ ನಲ್ಲಿ ಇರಿಸಲಾಗಿದ್ದಂತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಭಿಕ್ಷಕರ ವೇಷದಲ್ಲಿ ಬಂದಂತ ಮಹಿಳೆಯರು ಎಕಾ ಏಕಿ ಅಂಗಡಿಯೊಳಗೆ ನುಗ್ಗಿದ್ದಾರೆ . ಅಂಗಡಿಯವರು ಅವರನ್ನು ತಡೆಯಲು ಪ್ರಯತ್ನಿಸಿದರೂ ಸಹ ಅವರು ಯಾರ ಮಾತು ಕೇಳದೆ ಒಳಗೆ ನುಗ್ಗಿದ್ದಾರೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!