By: Oneindia Kannada Video Team
Published : December 18, 2017, 12:36

ಗುಜರಾತ್ ನಲ್ಲಿ ಮೊದಲ ಗೆಲುವಿನ ಪತಾಕೆ ಹಾರಿಸಿದ ಬಿಜೆಪಿ

Subscribe to Oneindia Kannada

ಇಂದು ಬೆಳಗ್ಗಿನಿಂದ ಗುಜರಾತ್ ನಲ್ಲಿ ಚುನಾವಣಾ ಮತ ಎಣಿಕೆ ಕಾವು ಏರುತ್ತಲೇ ಇದೆ. ಪೈಪೋಟಿ ಬಹಳ ಸಮಾನಾಗಿದ್ದು , ಯಾರು ವಿಜಯ ಪತಾಕೆ ಹಾರಿಸುತ್ತಾರೆ ಎಂಬುದನ್ನು ಯಾರಿಗೂ ಊಹಿಸಲು ಆಗುತ್ತಿಲ್ಲ . ಗುಜರಾತ್ ನಲ್ಲಿ ಬಿಜೆಪಿ ಖಾತೆ ತೆರೆದಿದೆ. ಮೊದಲ ಗೆಲುವನ್ನು ಇಲ್ಲಿ ಬಿಜೆಪಿ ದಾಖಲಿಸಿದೆ. ಎಲ್ಲಿಸ್ ಬ್ರಿಡ್ಜ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ರಾಕೇಶ್ ಶಾ (ಶಾ ರಾಕೇಶ್ ಭಾಯ್ ಜಸ್ವಂತ್ ಲಾಲ್) ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಕೇಶ್ ಶಾ 46,149 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿಜಯ್ ಕುಮಾರ್ ದವೆ ಕೇವಲ 14,134 ಮತಗಳನ್ನು ಪಡೆದಿದ್ದಾರೆ. ಚುನಾವಣಾ ಆಯೋಗದ ಮಾಹಿತಿಗಳ ಪ್ರಕಾರ ಸದ್ಯ ಗುಜರಾತ್ ನಲ್ಲಿ ಬಿಜೆಪಿ 100 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಇತರರು ಐದು ಕ್ಷೇತ್ರಗಳಲ್ಲಿ ಮುಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!