By : Oneindia Kannada Video Team
Published : January 08, 2018, 11:03

ಕೆಆರ್ ಮಾರುಕಟ್ಟೆಯಲ್ಲಿನ ಕೈಲಾಶ್ ಬಾರ್ ನಲ್ಲಿ ಅಚಾನಕ್ ಬೆಂಕಿ

ಬೆಂಗಳೂರಿನ ಸಿಟಿ ಮಾರುಕಟ್ಟೆ ಆವರಣದಲ್ಲಿರುವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬಾರ್ ನ ಐವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದರು. ನಿದ್ರಾವಸ್ಥೆಯಲ್ಲಿ ಇದ್ದಂತ ೫ ಜನ ಜೀವಂತವಾಗಿ ಬೂದಿಯಾಗಿದ್ದಾರೆ . ಈ ಬೆಂಕಿ ಅನಾಹುತಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ . ಮುಂಜಾನೆ ಸುಮಾರು ೨ ೩೦ ರ ಹೊತ್ತಿಗೆ ಈ ಅನಾಹುತ ಬೆಳಕಿಗೆ ಬಂದಿದ್ದು ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕದಳದವರು ಬಂದು ಬೆಂಕಿಯನ್ನು ನಿಂದಿಸಿದ್ದಾರೆ . ಈ ಅಚಾನಕ್ ಅನಾಹುತಕ್ಕೆ ಕಾರಣ ಇನ್ನು ತಿಳಿದಿ ಬಂದಿಲ್ಲ . ಪೊಲೀಸರು ಪ್ರಕರಣ ದಾಖಲಿಸಿದ್ದಾರೆ . ಈ ಐವರಲ್ಲಿ ಓರ್ವ ಮಹಿಳೆ ಕೂಡ ಇದ್ದಾರೆ . ದುರಂತದಲ್ಲಿ ಪ್ರಾಣ ಕಳೆದುಕೊಂಡವರು
ಸ್ವಾಮಿ (23) , ಪ್ರಸಾದ್ (20) , ಮಂಜುನಾಥ್ (45) , ಕೀರ್ತಿ (24) , ಮಹೇಶ್ (35)

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!