By : Oneindia Kannada Video Team
Published : March 24, 2018, 09:56

ಫೇಸ್ಬುಕ್ BFF ಹಸಿರು ಕಲರ್, ಅಸಲಿ ಬಣ್ಣ ಬಯಲು

ಬೆಂಗಳೂರು, ಮಾರ್ಚ್ 23: ಸಾಮಾಜಿಕ ಜಾಲ ತಾಣಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವ ಫೇಸ್ ಬುಕ್ ನಲ್ಲಿ ಸದ್ಯಕ್ಕಂತೂ BFF ಅಕ್ಷರಗಳು ಟ್ರೆಂಡಿಂಗ್ ನಲ್ಲಿವೆ. bff ಎಂದು ಕಮೆಂಟ್ ಮಾಡಿ, ನಿಮ್ಮ ಫೇಸ್ಬುಕ್ ಖಾತೆ ರಕ್ಷಿಸಿಕೊಳ್ಳಿ ಎನ್ನುವ ಪೋಸ್ಟ್ ಗಳು ಹೆಚ್ಚಾಗುತ್ತಿವೆ. ಆದರೆ, ಇದೊಂದು ನಕಲಿ ಸುದ್ದಿ, ಫೇಸ್ಬುಕ್ ಈ ರೀತಿ ಯಾವುದೇ ಸುರಕ್ಷಿತಾ ನಿಯಮ ಬಳಸುತ್ತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಫೇಸ್ಬುಕ್ ನಲ್ಲಿ ಈ ರೀತಿ ಅನೇಕ ಬಾರಿ, ಈ ರೀತಿ ಸುಳ್ಳು ಸುದ್ದಿಗಳು ಹರಡುತ್ತಾ ಇರುತ್ತವೆ. ಆದರೆ, ಬಳಕೆದಾರರು ಎಚ್ಚರದಿಂದಿರಬೇಕು. ಫೇಸ್ಬುಕ್ ಏನಾದರೂ ಸುರಕ್ಷಿತ ನಿಯಮಗಳನ್ನು ಬದಲಾಯಿಸಿದರೆ, ಅಥವಾ ಈ ರೀತಿ ಭದ್ರತೆ ಬಗ್ಗೆ ಪರೀಕ್ಷೆ ನಡೆಸುವುದಾದರೆ, ನಿಮಗೆ ಪ್ರತ್ಯೇಕವಾಗಿ ಮೆಸೇಜ್, ಅಲರ್ಟ್, ಇಮೇಲ್ ಕಳಿಸಲಾಗುತ್ತೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!