By : Oneindia Kannada Video Team
Published : December 22, 2017, 12:49

ಗುಜರಾತ್ ನ ಬರೂಚ್ ನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಕ್ಕೆ ಆಕ್ಸಿಡೆಂಟ್

ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಗುಜರಾತ್‌ನ ಬರೂಚ್ ನಲ್ಲಿ ಅಪಘಾತಕ್ಕೀಡಾಗಿ ಮತಯಂತ್ರಗಳಿಗೆ ಹಾನಿಯಾಗಿದೆ. ಮರುಮತಎಣಿಕೆಗೆ ಹಾರ್ದಿಕ್ ಪಟೇಲ್ ಬೆಂಬಲಿಗರು ಮನವಿ ಸಲ್ಲಿಸಿದ ಮರುದಿನವೇ ಈ ರೀತಿ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ.ಮತಯಂತ್ರಗಳು, ಮತಗಳನ್ನು ಪರಿಶೀಲಿಸಬಹುದಾಗಿದ್ದ ಪೇಪರ್ ಆಡಿಟ್ ಟ್ರಯಲ್ ಯಂತ್ರಗಳನ್ನು ಸಾಗಿಸುತ್ತಿದ್ದ ಲಾರಿ ಬರೂಚ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಮತಯಂತ್ರಗಳೆಲ್ಲಾ ನೆಲಕ್ಕೆ ಬಿದ್ದು ಕೆಲವಕ್ಕೆ ಹಾನಿಯಾಗಿವೆ.ಇದೊಂದು ಉದ್ದೇಶಪೂರ್ವಕ ಅಪಘಾತ ಎಂದಿರುವ ಪಾಟೀದಾರ್ ಅನಾಮತ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಮರುಮತಎಣಿಕೆಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಮತಯಂತ್ರ ತುಂಬಿದ್ದ ಲಾರಿ ಮುಗುಚಿ ಬಿದ್ದಿದೆ ಈ ಹಗರಣಕ್ಕೆ ಯಾವ ಹೆಸರು ಕೊಡುವುದು?' ಎಂದು ಪ್ರಶ್ನೆ ಮಾಡಿದ್ದಾರೆ.ಮತಯಂತ್ರ ಮತ್ತು ವಿವಿಪಿಎಟಿ ಯಂತ್ರಗಳನ್ನು ಜಂಬೂಸರ್ ನಿಂದ ಬರೂಚ್‌ನ ದಾಸ್ತಾನು ಕೇಂದ್ರಕ್ಕೆ ಸಾಗಿಸುವುವಾಗ ಅಪಘಾತ ನಡೆದಿದೆ ಎಂದಿರುವ ಸ್ಥಳೀಯ ಜಿಲ್ಲಾಧಿಕಾರಿ ಸಂದೀಪ್ ಸೇಗಲ್ ಉರುಳಿ ಬಿದ್ದ ಲಾರಿಯಲ್ಲಿದ್ದವು ಬಳಸಿದ ಇವಿಎಂಗಳಲ್ಲ, ಯಾವುದಾದರೂ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ ಬದಲಾಯಿಸಲು ಇಟ್ಟಿದ್ದ ಮೀಸಲು ಮತಯಂತ್ರಗಳಷ್ಟೆ ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!