By: Oneindia Kannada Video Team
Published : November 25, 2017, 03:07

ಊರಿನ ರಹಸ್ಯವನ್ನೆಲ್ಲ ಬೀದಿಗೆಳೆಯುತ್ತಿದ್ದ ‘ಡೋಂಟ್ ಕೇರ್’ ಮುನೆಪ್ಪ

Subscribe to Oneindia Kannada

ಮುನೆಪ್ಪ ಆರಡಿಗೆ ಹತ್ತಿರದ ಎತ್ತರದ ಆಳು. ಸಣಕಲ ದೇಹಿ. ಆದರೆ ನೂರು ಮನೆಗಳ ಊರಿಗೆ ಕೇಳಿಸುವಷ್ಟು ದೊಡ್ಡ ಗಂಟಲಿನ ಆಸಾಮಿ. ಊರಿನಲ್ಲಿ ಮುನೆಪ್ಪ ಅನ್ನುವುದಕ್ಕಿಂತ 'ಕಳ್ಳುಮುನೆಯಪ್ಪ'ನೆಂದೇ ಪರಿಚಿತ. ನಿತ್ಯವೂ ಕಳ್ಳು ಕುಡಿಯುತ್ತಿದ್ದುದರಿಂದ ಈ ಹೆಸರು ಬಂದಿತ್ತು. ನಿತ್ಯವೂ ಕುಡಿಯುತ್ತಿದ್ದ. ಅಲಾರಂ ಇಟ್ಟುಕೊಂಡವನಂತೆ ಸಂಜೆ ಏಳಾಗುತ್ತದ್ದಂತೆ ಬೀದಿಗಿಳಿಯುತ್ತಿದ್ದ.ರಾತ್ರಿ ಇಡೀ ಊರಿನ ಬೀದಿ ಬೀದಿ ತಿರುಗುತ್ತಿದ್ದ. ಸುಮ್ಮನೆ ಅಲ್ಲ, ನಿದ್ದೆಯಲ್ಲಿದ್ದವರೂ ಎದ್ದು ಮುನೆಪ್ಪ ಸ್ಫೋಟಿಸುವ ಗುಟ್ಟು ನಿಜಗಳನ್ನು ಕೇಳಿಸಿಕೊಳ್ಳಬೇಕು. ಅಷ್ಟು ಎತ್ತರದ ಧ್ವನಿಯಲ್ಲಿ ಮಾತಾಡುತ್ತ ಓಡಾಡುತ್ತಿದ್ದ. ಇವನೆಂದರೆ ಊರಿನ ಜನರಲ್ಲಿ ಕುತೂಹಲದೊಂದಿಗೆ ಹೆದರಿಕೆಯೂ ಗೂಡು ಕಟ್ಟಿರುತ್ತಿತ್ತು. ಬೇರೆಯವರ ವಿಷಯಕ್ಕೆ ಕುತೂಹಲವಾದರೆ, ತಮ್ಮ ವಿಷಯವೇನಾದರೂ ಆಗಿ ಬಿಟ್ಟರೆ ಎಂಬ ಅಂಜಿಕೆ.ಅತ್ಯಂತ ರಹಸ್ಯವಾಗಿ ನಡೆದುದೂ ಮುನೆಪ್ಪನಿಗೆ ತಿಳಿದುಬಿಟ್ಟರುತ್ತಿತ್ತು. ಅದು ಹೇಗೆ ತಿಳೀತಿತ್ತೆಂದು ತಲಾಷು ಮಾಡುತ್ತಿದ್ದವರಲ್ಲಿ ಯಾರೊಬ್ಬರೂ ಸಫಲರಾದುದಿಲ್ಲ. ಅವನ ಸುದ್ದಿ ಮೂಲ ಯಾವುದಾಗಿತ್ತೆಂಬುದು ಅವನ ಸಾವಿನ ನಂತರವೂ ನಿಗೂಢವಾಗಿಯೇ ಉಳಿದಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!