• search
By : Oneindia Video Kannada Team
Published : January 05, 2018, 01:00
Duration : 03:51

ಡೊನಾಲ್ಡ್ ಟ್ರಂಪ್ ರವರ ವಿವಾದಾತ್ಮಕ ಗುಟ್ಟುಗಳು ಬಟಾಬಯಲು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತು ವಿವಾದಾತ್ಮಕ ವಿಷಗಳನ್ನೊಳಗೊಂಡ Fire and Fury: Inside the Trump White House ಎಂಬ ಪುಸ್ತಕ ಇಂದು(ಜ.05) ಬಿಡುಗಡೆಯಾಗಲಿದೆ. ಮೈಕೆಲ್ ವೊಲ್ಫ್ ಎಂಬ ಲೇಖಕರು ಬರೆದ ಈ ಪುಸ್ತಕ ಪ್ರಕಟವಾಗದಂತೆ ಹಲವು ಪ್ರಯತ್ನಗಳು ನಡೆದಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಗೆದ್ದಿದೆ. ಕೊನೆಗೂ ಈ ಪುಸ್ತಕ ಬಿಡುಗಡೆಯಾಗುತ್ತಿದೆ. ಟ್ರಂಪ್ ಆಡಳಿತವನ್ನು ಕುರಿತು ವಿವಾದಾತ್ಮಕ, ಆರೋಪಾತ್ಮಕ ಅಂಶಗಳನ್ನು ಹೊಂದಿರುವ ಈ ಪುಸ್ತಕ ಹಲವು ಅಡೆತಡೆಗಳನ್ನು ಮೀರಿ ಇಂದು ಬಿಡುಗಡೆಯಾಗುತ್ತಿದೆ. ದಯವಿಟ್ಟು ಕೊಂಡು ಓದಿ ಎಂದು ಲೇಖಕರಾದ ಮೈಕೆಲ್ ಕೇಳಿಕೊಂಡಿದ್ದಾರೆ.ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆಂದು ಸ್ವತಃ ಟ್ರಂಪ್ ಗೂ ನಿರೀಕ್ಷೆಯಿರಲಿಲ್ಲ ಎಂದು ಈ ಕೃತಿಯಲ್ಲಿ ನೇರವಾಗಿಯೇ ಬರೆಯಲಾಗಿದೆ. ಅಲ್ಲದೆ ಕೋಪ, ಆವೇಶ, ಬೆಂಕಿಯ ಮಿಶ್ರಣದಂತೇ ಕಾಣುವ ಟ್ರಂಪ್ ಅವರ ಕುರಿತ ಹಲವು ಗುಟ್ಟಿನ ಸಂಗತಿಗಳನ್ನು ಈ ಪುಸ್ತಕ ಬಟಾಬಯಲುಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more