By: Oneindia Kannada Video Team
Published : November 25, 2017, 03:06

ಡೊನಾಲ್ಡ್ ಟ್ರಂಪ್ ದುರಹಂಕಾರಕ್ಕೆ ಟೈಮ್ಸ್ ಕೊಟ್ಟ ಉತ್ತರ

Subscribe to Oneindia Kannada

'ನಿಮ್ಮ ದುರಹಂಕಾರಕ್ಕೆ ಟೈಮ್ ತುಂಬಾ ಚಿಕ್ಕದು ಟ್ರಂಪ್'! 94 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಅಮೆರಿಕದ ಖ್ಯಾತ ಪತ್ರಿಕೆ 'ಟೈಮ್' ಪ್ರತಿವರ್ಷ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ವರ್ಷಾಂತ್ಯಕ್ಕೆ ಘೋಷಿಸುತ್ತದೆ. ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವರ್ಷದ ವ್ಯಕ್ತಿ ಎಂದು ಘೋಷಿಸಿತ್ತು. ಈಗ ಅದೇ 'ವರ್ಷದ ವ್ಯಕ್ತಿ' ಸಲ್ಲದ ಹೇಳಿಕೆಯನ್ನು ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. "ಟೈಮ್ ಮ್ಯಾಗಜೀನ್ ಬಹುಶಃ ಸತತ ಎರಡನೇ ವರ್ಷವೂ ನನ್ನನ್ನೇ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಲು ಹವಣಿಸುತ್ತಿದೆ. ಆದರೆ, ಈ ಸ್ಪರ್ಧೆಯಿಂದ ನಾನು ಹಿಂದೆ ಸರಿದಿದ್ದೇನೆ" ಎಂದು ಅವರು ಶುಕ್ರವಾರ ಟ್ವೀಟ್ ಮಾಡಿ ವಿವಾದ ಹುಟ್ಟುಹಾಕಿದ್ದಾರೆ.ಜನರೇ ಆಯ್ಕೆ ಮಾಡುವ ಈ ಸ್ಪರ್ಧೆಯಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದವರು ಟೈಮ್ ಮ್ಯಾಗಜೀನ್ ಗೆ ವಿಶೇಷ ಸಂದರ್ಶನ ನೀಡಬೇಕಾಗುತ್ತದೆ ಮತ್ತು ಫೋಟೋಶೂಟ್ ನಲ್ಲಿ ಭಾಗವಹಿಸಬೇಕಾಗುತ್ತದೆ. ಸಂದರ್ಶನ ಮತ್ತು ಫೋಟೋಶೂಟ್ ಎರಡೂ ಇಷ್ಟವಿಲ್ಲದಿದ್ದರಿಂದ ನಾನು ಈ ಪ್ರಶಸ್ತಿಯನ್ನು 'ಪಾಸ್' ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!