By : Oneindia Kannada Video Team
Published : December 14, 2017, 01:37

ಗುಜರಾತ್ ಗಿಂತ ಕರ್ನಾಟಕ ಶ್ರೇಷ್ಠ ಅಂದ್ರು ಕೆಪಿಸಿಸಿ ಕಾರ್ಯಧಕ್ಷ ದಿನೇಶ್ ಗುಂಡೂರಾವ್

ಗುಜರಾತಿನಲ್ಲಿ ವಿಧಾನಸಭೆ ಚುನಾವಣೆಯ ಹವಾ ಉತ್ತುಂಗಕ್ಕೇರಿದೆ. ಇತ್ತ ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ರಾಜಕೀಯ ರಂಗದಲ್ಲಿ ಸಾಕಷ್ಟು ಹುರುಪು ಮನೆಮಾಡಿದೆ.ಡಿ.18 ರಂದು ಗುಜರಾತಿನ 5 ವರ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ಅಭಿವೃದ್ಧಿ ಎಂದೊಡನೆ ಗುಜರಾತ್ ಮಾದರಿ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿರುವ ಕರ್ನಾಟಕದ ಕಾಂಗ್ರೆಸ್ಸಿಗರು, ಗುಜರಾತಿಗಿಂತ ಕರ್ನಾಟಕವೇ ಹೆಚ್ಚು ಪ್ರಗತಿ ಹೊಂದಿದೆ ಎನ್ನುತ್ತಿದ್ದಾರೆ.ಅದಕ್ಕೆ ದಾಖಲೆಗಳನ್ನೂ ಒದಗಿಸಿದ್ದಾರೆ. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಲು ಸಾಲು ಟ್ವೀಟ್ ಗಳ ಮೂಲಕ ಅಭಿವೃದ್ಧಿ ಮಾದರಿಯಲ್ಲಿ ಕರ್ನಾಟಕ ಗುಜರಾತಿಗಿಂತಲೂ ಮುಂದಿದೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.ಗುಜರಾತಿಗಿಂತ ಕರ್ನಾಟಕವೇ ಶ್ರೇಷ್ಠ, ಯಾಕೆ ಎಂಬುದಕ್ಕೆ #KarnatakaMarchesAhead ಹ್ಯಾಶ್ ಟ್ಯಾಗ್ ನಲ್ಲಿ ದಿನೇಶ್ ಗುಂಡೂರಾವ್ ಸಾಲು ಸಾಲು ಟ್ವೀಟ್ ಮಾಡಿ ಕಾರಣ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!