By : Oneindia Kannada Video Team
Published : November 27, 2017, 12:38

ಡಿ ಐ ಜಿ ರೂಪ ಡಿ ಮೌದ್ಗೀಲ್ ಜೊತೆ ನಟ ಕಮಲ್ ಹಾಸನ್ ವೈರಲ್ ಫೋಟೋ

ಯೂನಿರ್ವಸಲ್ ಸ್ಟಾರ್ ಕಮಲ್ ಜತೆ ಸೂಪರ್ ಕಾಪ್ ರೂಪಾ! ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಯೂನಿರ್ವಸಲ್ ಸ್ಟಾರ್ ಕಮಲ್ ಹಾಸನ್ ಅವರನ್ನು ಇತ್ತೀಚೆಗೆ ಕರ್ನಾಟಕದ ಸೂಪರ್ ಕಾಪ್ ರೂಪಾ ಡಿ ಮೌದ್ಗೀಲ್ ಅವರು ಭೇಟಿ ಮಾಡಿದ್ದಾರೆ. ಕಮಲ್ ಜತೆಗಿನ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.ಆದರೆ, ಈ ಫೋಟೋ ನೋಡಿ ಹಲವಾರು ಮಂದಿಯ ಹುಬ್ಬೇರಿದೆ. ಕಮಲ್ ಜತೆ ಫೋಟೋ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮನ್ನು ಅನ್ ಫಾಲೋ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ರೂಪಾ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.ಸಾರ್ವಜನಿಕರ ಟೀಕೆಗಳು ಟ್ವೀಟ್ ರೂಪದಲ್ಲಿ ಹರಿದು ಬರತೊಡಿದಾಗ ಇದಕ್ಕೆ ರೂಪಾ ಅವರು ಪ್ರತ್ಯುತ್ತರ ನೀಡಿದ್ದಾರೆ. ಮಾನವ ಸಂಘ ಜೀವಿ, ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸುವಾಗ, ವ್ಯವಹರಿಸುವಾಗ, ಪ್ರತಿಕ್ರಿಯಿಸುವಾಗ ಸಾಮಾಜಿಕ ಬದ್ಧತೆ, ಜವಾಬ್ದಾರಿ ಹೊಂದಿರಬೇಕು, ಕಮಲ್ ಅವರೊಟ್ಟಿಗೆ ತೆಗೆಸಿಕೊಂಡ ಫೋಟೋ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ತಿಳಿ ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!