By: Oneindia Kannada Video Team
Published : December 21, 2017, 06:30

ಧಾರವಾಡದಲ್ಲಿ ಟ್ರಾಫಿಕ್ ಉಲ್ಲಂಘನೆ ಮಾಡಿ ಪೊಲೀಸ್ ಜೊತೆ ಜಟಾಪಟಿ

Subscribe to Oneindia Kannada

ಕಾಂಗ್ರೆಸ್ ನಾಯಕನೊಬ್ಬ ಸಂಚಾರಿ ನಿಯಮವನ್ನು ಉಲ್ಲಂಘಿಸಿ, ಸಂಚಾರಿ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಬಿಎಂಡಬ್ಲ್ಯೂ ಕಾರಿನಲ್ಲಿ ಸಂಚರಿಸುವಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇರ್ಮಾನ್ ಕಳ್ಳಿಮನಿ ಪೊಲೀಸರ ಜೊತೆ ರಾದ್ದಾಂತ ಮಾಡಿಕೊಂಡಿದ್ದಾನೆ.ಮಂಗಳವಾರ ಮಧ್ಯಾಹ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಕಚೇರಿ ಮುಂಭಾಗದಲ್ಲಿ ಈ ರಂಪಾಟ ನಡೆದಿದೆ. ಇದಕ್ಕೆ ನೂರಾರು ಜನರು ಮೂಕ ಸಾಕ್ಷಿಯಾಗಿದ್ದರು.ಧಾರವಾಡ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಘೇಶ ಚನ್ನಣ್ಣವರ ಅವರೊಂದಿಗೆ ವಾಗ್ವದ ಮಾಡಿಕೊಂಡಿದ್ದಾರೆ. ಅರ್ಧಗಂಟೆಗೂ ಅಧಿಕ ಕಾಲ ವಾದ-ವಿವಾದ ನಡೆದಿದೆ.ಪೊಲೀಸ್ ಅಧಿಕಾರಿಯ ಜೊತೆ ಏಕವಚನಲ್ಲಿ ಇರ್ಮಾನ್ ಗಲಾಟೆ ಮಾಡಿದ್ದರಿಂದ ಮುರುಘೇಶ ಚನ್ನಣ್ಣನವರ್ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದರು. ಇದರಿಂದ ಇನ್ನಷ್ಟು ಕುಪಿತಗೊಂಡ ಇರ್ಮಾನ್ ಕಳ್ಳಿಮನಿ, ನಿಮ್ಮ ವಾಹನ ಚಾಲಕ ಕೂಡ ಬೆಲ್ಟ್ ಹಾಕಿರಲಿಲ್ಲ. ಅವರ ಮೇಲೆ ಕೇಸ್ ಹಾಕಿ, ಅಲ್ಲದೆ, ಅವರಿಗೆ ಮೊದಲು ಚೆನ್ನಾಗಿ ಮಾತನಾಡಲು ಕಲಿಸಿ ಎಂದು ಸಲಹೆ ನೀಡಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!