By : Oneindia Kannada Video Team
Published : December 02, 2017, 03:06

ನನ್ನ ರಾಜಕೀಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ದೇವೇಗೌಡ

ರಾಮನಗರ, ಡಿಸೆಂಬರ್.02: 'ನನ್ನ ರಾಜಕೀಯಕ್ಕೆ ಅಡ್ಡಿಮಾಡಲು ಯಾರಿಂದಲೂ ಆಗುವುದಿಲ್ಲ, ಹಾಗೇಯೇ ಜೆಡಿಎಸ್ ಬೆಳವಣಿಗೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರು ರಾಮನಗರದಲ್ಲಿ ಅಬ್ಬರಿಸಿದ್ದಾರೆ.ರಾಮನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು. ನಂತರ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೊಂದಾಣಿಕೆ ರಾಜಕಾರಣ ಹಿಂದೆಯೂ ಮಾಡಿಲ್ಲ ಮುಂದೆಯೂ ಮಾಡಲ್ಲ, ಅದರ ಪ್ರಶ್ನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಪ್ರಜ್ವಲ್ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ಕೊಟ್ಟ ದೇವೇಗೌಡಯುದ್ದಕ್ಕೆ ನಿಂತಮೇಲೆ ಇಂಟ್ರನಲ್ ಮತ್ತು ಎಕ್ಸಟ್ರನಲ್ ಅಂಡರ್ ಸ್ಟಾಂಡಿಂಗ್ ಇಲ್ಲ ರಾಜಕೀಯಕ್ಕೆ ಬಂದು 57 ವರ್ಷಗಳಾಗಿವೆ ನನ್ನ ರಾಜಕೀಯವನ್ನು ನಿಲ್ಲಿಸಲು ಆಗುವುದಿಲ್ಲ ಹಾಗೇಯೇ ಜೆಡಿಎಸ್ ಬೆಳವಣಿಗೆಯನ್ನು ಸಹ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನ ಎಚ್ ಡಿ ಕುಮಾರಸ್ವಾಮಿಯವರು ತಯಾರು ಮಾಡುತ್ತಿದ್ದಾರೆ. ಇಂದು ಸಹ ಅದೇ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಲೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ರೆ ಹಲವಾರು ಗೊಂದಲಗಳು ಉಂಟಾಗಿ ಕುತ್ತಿಗೆಗೆ ಬರುತ್ತೆ. ಹಾಗಾಗಿ ಎಲ್ಲವನ್ನು ಸಿದ್ದಪಡಿಸಿದ ಬಳಿಕ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!