By : Oneindia Kannada Video Team
Published : January 29, 2018, 11:29

2 ಸ್ಟ್ರೋಕ್ ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಕೆಗೆ ಪ್ರಸ್ತಾವ

2 ಸ್ಟ್ರೋಕ್ ಆಟೋಗಳಿಗೆ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳು ಅನುಮತಿ ನೀಡುವಂತೆ ಕೋರಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಅವರು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ ನಿಂದ 2ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕಬೇಕು ಎಂಬ ಸೂಚನೆಯನ್ನು ನೀಡಲಾಗಿತ್ತು. ಇದುವರೆಗೂ ಒಂದು ಆಟೋ ಚಾಲಕರೂ ಹೆಸರು ನೋಂದಾಯಿಸಿಕೊಳ್ಳದ ಕಾರಣ ಗುಜರಿಗೆ ಹಾಕಬೇಕೆಂಬ ಸೂಚನೆಗೆ ತಿದ್ದುಪಡಿ ತರಬೇಕು, ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿಯನ್ನು ಅಳವಡಿಸಿಕೊಳ್ಳುವಂತೆ ಅನುಮತಿ ನೀಡಬೇಕು ಎಂದು ಪತ್ರಬರೆದಿದ್ದಾರೆ.

2017-18-ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ 2 ಸ್ಟ್ರೋಕ್ ಆಟೋಗಳ ಸಂಚಾರವನ್ನು ನಗರದಲ್ಲಿ ನಿಷೇಧಿಸಲಾಗುತ್ತಿದೆ. ಆ ಆಟೋಗಳನ್ನು ಗುಜರಿಗೆ ಹಾಕಿದರೆ ಮಾತ್ರ, ಹೊಸ ಆಟೋ ಖರೀದಿಗೆ 30 ಸಾವಿರ ಸಬ್ಸಿಡಿ ನೀಡುವುದಾಗಿ ಸಾರಿಗೆ ಇಲಾಖೆ ತಿಳಿಸಿತ್ತು. ಎಲೆಕ್ಟ್ರಿಕ್ ವಾಹನ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. 2 ಸ್ಟ್ರೋಕ್ ಆಟೊಗಳನ್ನು ಗುಜರಿಗೆ ಹಾಕಲು ಇಷ್ಟವಿಲ್ಲದವರು ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಸಿಕೊಳ್ಳಬಹುದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!