By : Oneindia Kannada Video Team
Published : January 18, 2017, 09:57

ಸಾವಿಗೆ ಕಾರಣವಾಯ್ತು ಡೇರಿಂಗ್ ಸೆಲ್ಫಿ!

ರೈಲ್ವೇ ಟ್ರ್ಯಾಕ್ ಮೇಲೆ ಡೇರಿಂಗ್ ಸೆಲ್ಫಿ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲು ಮುಂದಾಗಿದ್ದ, ಇಬ್ಬರು ವಿದ್ಯಾರ್ಥಿಗಳು ದುರಂತವಾಗಿ ಸಾವು ಕಂಡಿದ್ದಾರೆ. ಯಶ್ ಕುಮಾರ್(16) ಹಾಗೂ ಶುಭಂ(14) ಮೃತಪಟ್ಟ ಬಾಲಕರು. ಇಬ್ಬರಿಗೂ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿ ಇತ್ತು. ಇವರು 400 ರೂ. ಬಾಡಿಗೆಗೆ ಎಸ್.ಎಲ್.ಆರ್. ಕ್ಯಾಮೆರಾ ತಂದಿದ್ದಾರೆ. ನವದೆಹಲಿಯ ರೈಲ್ವೇ ಟ್ರ್ಯಾಕ್ ಮೇಲೆ ಚಲಿಸುತ್ತಿದ್ದ ರೈಲನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆಯುವ ಸಂದರ್ಭದಲ್ಲಿ, ಮತ್ತೊಂದು ರೈಲು ಎದುರಿಗೆ ಬಂದಿದ್ದು, ಇಬ್ಬರೂ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!