By : Oneindia Kannada Video Team
Published : December 21, 2017, 12:30

ಮೋದಿಯವರೇ ಜನರಿಗೆ ಬೋರು ಹೊಡೆಸಿದ್ದು ಸಾಕು ನೀವು ಹಿಮಾಲಯಕ್ಕೆ ಹೋಗಿ ಎಂದ ದಲಿತ ನಾಯಕ ಜಿಗ್ನೇಶ್ ಮೇವಾನಿ

ಗುಜರಾತ್ ನಲ್ಲಿ ದಲಿತರ ಪರ ದನಿ ಎತ್ತೋ ಜಿಗ್ನೇಶ್ ಮೇವಾನಿ ಇದೀಗ ಗುಜರಾತ್ ಎಲೆಕ್ಷನ್ ಫಲಿತಾಂಶದ ಬಳಿಕ ಪ್ರಧಾನಿ ಮೋದಿಯವರಿಗೆ ತಮ್ಮ ತೀಕ್ಷ್ಣ ಪದಗಳಿಂದ ಟೀಕೆ ಮಾಡಿದ್ದಾರೆ . ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಜರಾತ್‌ನ ನೂತನ ಶಾಸಕ ಜಿಗ್ನೇಶ್‌ ಮೇವಾನಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಭಾರಿ ವಿವಾದ ಸೃಷ್ಟಿಸಿದೆ . ೧೫೦ ಸೀಟ್ ಗಳನ್ನ ಗೆದ್ದೇ ಗೆಲ್ಲುವೆ ಎಂದು ಟಿವಿ ಚಾನೆಲ್ ಗಳ ಮುಂದೆ ಹೇಳಿಕೊಂಡು ಗರ್ವದಿಂದ ಬೀಗುತ್ತಿದ್ದ ಮೋದಿಯವರಿಗೆ ಈಗ ಗರ್ವ ಒಡೆದು ನುಚ್ಚು ನೂರಾಗಿದೆ . ಅವರು ದೇಶದ ಜನರನ್ನು ತಮ್ಮ ಮಾತುಗಳಿಂದ ಬೋರು ಹೊಡೆಸುವುದನ್ನು ನಿಲ್ಲಿಸಿ ಹಿಮಾಲಯಕ್ಕೆ ಹೋಗಿ ಯಾವುದಾದರೂ ರಾಮ ಮಂದಿರಕ್ಕೆ ಹೋಗಿ ಗಂಟೆ ಹೊಡೆಯಿರಿ ಎಂದಿದ್ದಾರೆ ಜಿಗ್ನೇಶ್ ಮೇವಾನಿ . ಒಟ್ಟಾರೆ ಜಿಗ್ನೇಶ್ ಮೇವಾನಿ , ಹಾರ್ದಿಕ್ ಪಟೇಲ್ ರಂತಹ ಯುವ ನಾಯಕರು ರಾಜಕೀಯ ಪ್ರವೇಶಿಸಿರುವುದು ಮೋದಿಯವರ ಹವಾ ಕಡಿಮೆ ಮಾಡಿರುವುದಂತೂ ಹೌದು .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!