By: Oneindia Kannada Video Team
Published : November 21, 2017, 01:43

ಸೆಲ್ಫಿ ತೆಗೆಯಲು ಬಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ ಡಿ ಕೆ ಶಿವಕುಮಾರ್

Subscribe to Oneindia Kannada

ಸೆಲ್ಫಿ ತೆಗೆಯಲು ಬಂದ ವಿದ್ಯಾರ್ಥಿಗೆ 'ಪವರ್' ಸಚಿವರ ಪೆಟ್ಟು! ಕರ್ನಾಟಕದ 'ಪವರ್ ಫುಲ್ ' ಸಚಿವ ಡಿಕೆ ಶಿವಕುಮಾರ್ ಅವರು ಒಂದು ಸೆಲ್ಫಿ ತೆಗೆಸಿಕೊಳ್ಳುವ ಆಸೆ ಹೊತ್ತ ವಿದ್ಯಾರ್ಥಿಯೊಬ್ಬರಿಗೆ ಪೆಟ್ಟುಕೊಟ್ಟ ಕಾರಣ ಬಹಿರಂಗವಾಗಿದೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದ ಡಿಕೆ ಶಿವಕುಮಾರ್ ಅವರು ಸೆಲ್ಫಿ ತೆಗೆಯಲು ಯತ್ನಿಸಿದ ವಿದ್ಯಾರ್ಥಿಗೆ ಪೆಟ್ಟುಕೊಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಕಾಲೇಜೊಂದರಲ್ಲಿ ಮಕ್ಕಳ ಹಕ್ಕುಗಳ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರು ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಎದುರಿಗೆ ಮಾಧ್ಯಮ ಪ್ರತಿನಿಧಿಗಳು ಸಿಕ್ಕಿದ್ದಾರೆ.ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಧೈರ್ಯ ಮಾಡಿ, ಡಿಕೆಶಿ ಅವರ ಹಿಂಬದಿಯಲ್ಲಿ ಮಂದಹಾಸ ಬೀರುತ್ತಾ ನಿಂತಿದ್ದ ಕೃಪಾ ಆಳ್ವಾ ಅವರ ಜತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.ಸಚಿವರ ಹಿಂಭಾಗದಲ್ಲಿ ಗದ್ದಲವಾಗುತ್ತಿದ್ದಂತೆ ಹಿಂತಿರುಗಿ ನೋಡಿದ ಡಿಕೆಶಿ, ಕೃಪಾ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಕೈಗೆ ಪೆಟ್ಟುಕೊಟ್ಟಿದ್ದಾರೆ. ಇದನ್ನು ನೋಡುತ್ತಾ ನಿಂತಿದ್ದ ಕೃಪಾ ಆಳ್ವಾ ಅವರು ನಸುನಕ್ಕಿದ್ದಾರೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಅವರು ಈ ಕಾರ್ಯಕ್ರಮದ ಆಯೋಜನೆಯ ಹೊಣೆ ಹೊತ್ತಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!