By : Oneindia Kannada Video Team
Published : December 11, 2017, 12:09

ಡಿಕೆಶಿಯಿಂದ ಬೇನಾಮಿ ಆಸ್ತಿಗಾಗಿ 4 ಕೋಟಿ ರು ಹೂಡಿಕೆ

ಬೆಂಗಳೂರು, ಡಿಸೆಂಬರ್ 11: 'ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು 4 ಕೋಟಿ ರು ಗೂ ಅಧಿಕ ಮೊತ್ತವನ್ನು ಬಳಸಿ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.ಬೆಂಗಳೂರಿನ ಅರಮನೆ ಆಸ್ತಿಯ ಗುತ್ತಿಗೆ ಒಪ್ಪಂದವನ್ನು ಡಿಕೆ ಶಿವಕುಮಾರ್ ಅವರು ತಮ್ಮ ಸಂಬಂಧಿಕರ ಹೆಸರಿಗೆ ಮಾಡಿಸಿದ್ದಾರೆ' ಎಂದು ಆದಾಯ ತೆರಿಗೆ (ಐ.ಟಿ) ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ. ಮೈಸೂರು ರಾಜ ಮನೆತನದ ವಿಶಾಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಆದಾಯ ತೆರಿಗೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.'ಡಿ.ಕೆ. ಶಿವಕುಮಾರ್ ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಹೆಸರಿನಲ್ಲಿ ವ್ಯವಹಾರ ನಡೆಸಿದ್ದಾರೆ. ವಿಶಾಲಾಕ್ಷಿ ದೇವಿ ಅವರಿಗೆ 1 ಕೋಟಿ ರುಗಳನ್ನು ಚೆಕ್ ರೂಪದಲ್ಲಿ ನೀಡಿದ್ದಾರೆ. ಉಳಿದ 4 ಕೋಟಿ ರು ನಗದು ರೂಪದಲ್ಲಿ ಚಂದ್ರಶೇಖರ ಸುಖಪುರಿ ಎಂಬುವರ ಮೂಲಕ ನೀಡಿದ್ದಾರೆ. ಒಟ್ಟು 5 ಕೋಟಿ ರು ಹೂಡಿಕೆ ಮಾಡಿದ್ದಾರೆ' ಎಂದು ಐ.ಟಿ ಇಲಾಖೆ ತಿಳಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!