By: Oneindia Kannada Video Team
Published : November 27, 2017, 12:34

ಡಿ ಕೆ ಶಿವಕುಮಾರ್ ಕುಟುಂಬ ಹಾಗು ಎಚ್ ಡಿ ದೇವೇಗೌಡ್ರ ಕುಟುಂಬ ಒಂದಾಗ್ತಿದ್ಯಾ?

Subscribe to Oneindia Kannada

ಒಂದೇ ವೇದಿಕೆಯಲ್ಲಿ ಗೌಡ್ರ ಸೊಸೆ, ಡಿಕೆಶಿ: ಏನೇನೋ ರಾಜಕೀಯ ಸುದ್ದಿ. ಜೆಡಿಎಸ್ ವರಿಷ್ಠ ದೇವೇಗೌಡರ ತಲೆಯಲ್ಲಿ ಅದೇನು ರಾಜಕೀಯ ಲೆಕ್ಕಾಚಾರ ಓಡಾಡುತ್ತಿದೆಯೋ ಗೊತ್ತಿಲ್ಲ. ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದರೂ, ಕುಟುಂಬದಿಂದ ಇನ್ನೂ ಮೂವರು ಅಸೆಂಬ್ಲಿ ಚುನಾವಣಾ ತಯಾರಿಯಲ್ಲಿದ್ದಾರೆ. ಗೌಡ್ರ ಸೊಸೆ ಮತ್ತು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿಯವರು ಚನ್ನಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾನುವಾರ (ನ 26) ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಕೂಡಾ ಭಾಗಿಯಾಗಿದ್ದರು.ರಾಜಕೀಯವಾಗಿ ಹಾವು-ಮುಂಗುಸಿಯಂತಿರುವ ಗೌಡ್ರ ಮತ್ತು ಡಿಕೆಶಿ ಕುಟುಂಬ, ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಹೆಡೆಮುರಿಕಟ್ಟಲು, ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾರಾ ಎನ್ನುವುದು ಚನ್ನಪಟ್ಟಣದ ಕಾರ್ಯಕ್ರಮದ ನಂತರ ಹೊರಬಿದ್ದ ರಾಜಕೀಯ ಗುಸುಗುಸು ಸುದ್ದಿ.ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ 'ಕನಕನ ಹಬ್ಬ' ಕಾರ್ಯಕ್ರಮಕ್ಕೆ ಅನಿತಾ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಇಬ್ಬರೂ ಗಹನ ಚರ್ಚೆಯಲ್ಲಿ ತೊಡಗಿದ್ದದ್ದು, ಮುಂದಿನ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎನ್ನುವ ಚರ್ಚೆ ಆರಂಭವಾಗಲು ಕಾರಣವಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!