By : Oneindia Kannada Video Team
Published : November 07, 2017, 04:18

ನನ್ನ ಫೋನ್ ಟ್ರ್ಯಾಪ್ ಆಗಿದೆ ಎಂದು ದೂರಿದ ಡಿ ಕೆ ಶಿವಕುಮಾರ್

'ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ, ಫೋನ್ ಟ್ಯಾಪ್ ಆಗಿದೆ' 'ನನ್ನ ದೂರವಾಣಿ ಕರೆಯ ಕದ್ದಾಲಿಕೆಯೂ ನಡೆಯುತ್ತಿದೆ. ನಿತ್ಯ ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೋಮವಾರ ತಮ್ಮ ಫೋನ್ ಟ್ಯಾಪ್ ಆಗುತ್ತಿದೆ ಎಂದು ಹೇಳಿದ್ದರು. ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ನಿತ್ಯ ನನ್ನನ್ನ ಕೆಲವರು ಫಾಲೋ ಮಾಡುತ್ತಿದ್ದಾರೆ. ನಾನು ಹೋದ ಕಡೆಯಲ್ಲ ಕೆಲವು ಬೆನ್ನ ಹಿಂದೆ ಬರುತ್ತಿದ್ದಾರೆ. ಆದರೆ, ನಾನು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದರು.ಕೆಲವು ಸಂಸ್ಥೆಗಳಿಗೆ ಫೊನ್ ಕದ್ದಾಲಿಕೆ ಮಾಡುವ ಅಧಿಕಾರ ಇರುತ್ತದೆ. ಇಂಥವರೇ ಮಾಡುತ್ತಿದ್ದಾರೆ ಎಂದು ಹೇಳುವುದು ಹೇಗೆ?. ನಾನು ಅಧಿಕಾರಕ್ಕೆ ಬಂದ ದಿನದಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ' ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.'ನಾನು ಕನಕಪುರದ ಬಂಡೆಯಿಂದ ಬಂದವನು. ತಲೆ ಗಟ್ಟಿ ಇದೆ ಎಂದ ಬಂಡೆಗೆ ಚಚ್ಚಿಕೊಂಡರೆ ಪೆಟ್ಟಾಗುವುದು ತಲೆಗೆ' ಎಂದು ಶಿವಕುಮಾರ್ ಹೇಳಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!