By : Oneindia Kannada Video Team
Published : December 20, 2017, 12:46

ಬೆಂಗಳೂರಿನಲ್ಲಿ ಐ.ಪಿ.ಎಲ್ 11ರ ಹಾರಾಜು, ಮರಳಿ ಆಡಲಿರೋ ಸಿ.ಎಸ್.ಕೆ ಹಾಗು ಆರ್.ಆರ್

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನ 11ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮುಂದಿನ ಐಪಿಎಲ್ ನಲ್ಲಿ ಕಣಕ್ಕಿಳಿಯಲಿವೆ. 2018ರ ಐಪಿಎಲ್ ನಲ್ಲಿ ಈ ಎರಡು ತಂಡಗಳು ಆಡಲಿದ್ದು, ಹಳೆ ತಂಡದಲ್ಲಿದ್ದ 5 ಆಟಗಾರರನ್ನು ಖರೀದಿ ಮಾಡಬಹುದು ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಮತ್ತೊಮ್ಮೆ ಬ್ಯಾಟ್ ಬೀಸಬಹುದಾಗಿದೆ. ಬೆಂಗಳೂರಿನಲ್ಲಿ ಜನವರಿ 27 ಹಾಗೂ 28ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆಟಗಾರರ ಸಂಬಳ ಮಿತಿ 80 ಕೋಟಿ ರುಗೆ ಏರಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!