By : Oneindia Kannada Video Team
Published : December 29, 2017, 06:29

ಮಹಿಳಾ ಪೇದೆ ಕಪಾಳಕ್ಕೆ ಹೊಡೆದು ವಾಪಾಸ್ ಹೊಡೆಸಿಕೊಂಡ ಕಾಂಗ್ರೆಸ್ ಎಂ ಎಲ್ ಎ

ಹಿಮಾಚಲ ಪ್ರದೇಶದ ಕಾಂಗ್ರೆಸ್ ಶಾಸಕಿ ಶಿಮ್ಲಾದ ಮಹಿಳಾ ಪೇದೆಯಿಂದ ಶುಕ್ರವಾರ ಟಿಟ್-ಫಾರ್ -ಟ್ಯಾಟ್ ಪ್ರತಿಕ್ರಿಯೆ ಪಡೆದಿದ್ದಾರೆ. ಎಂ ಎಲ್ ಎ ಆಶಾ ಕುಮಾರಿ ಆ ಮಹಿಳೆ ಪೇದೆ ಜೊತೆ ವಾಗ್ವಾದಕ್ಕೆ ಇಳಿದು ಕೋಪದಲ್ಲಿ ಹಿಂದೂ ಮುಂದು ನೋಡದೆ ಡ್ಯೂಟಿಯಲ್ಲಿದ್ದ ಮಹಿಳಾ ಪೇದೆ ಕಪಾಳಕ್ಕೆ ಹೊಡೆದಿದ್ದಾರೆ. ಇನ್ನು ಆ ಮಹಿಳಾ ಪೇದೆ ಕೂಡ ವಾಪಾಸ್ ಎಂ ಎಲ್ ಎ ಆಶಾ ಕುಮಾರಿ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಶಿಮ್ಲಾದಲ್ಲಿ ರಾಹುಲ್ ಗಾಂಧಿಯವರ ಒಂದು ಸಭೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಅಲ್ಲಿಗೆ ಬಂದ ಎಂ ಎಲ್ ಎ ಆಶಾ ಕುಮಾರಿ ಒಳಗೆ ಹೋಗಲು ಯತ್ನಿಸಿದ್ದಾರೆ. ತಕ್ಷಣ ಮಹಿಳಾ ಪೇದೆ ಅವರನ್ನ ತಡೆದು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ಆ ಎಂ ಎಲ್ ಎ ಆಶಾ ಕುಮಾರಿ ಡ್ಯೂಟಿಯಲ್ಲಿದ್ದ ಪೇದೆಯ ಕಪಾಳಕ್ಕೆ ಹೊಡೆದಿದ್ದಾರೆ. ಆ ಪೇದೆಗೂ ಕೂಡ ಕೋಪ ಬಂದು ವಾಪಾಸ್ ಎಂ ಎಲ್ ಎ ಆಶಾ ಕುಮಾರಿ ಕಪಾಳಕ್ಕೆ ಹೊಡೆದಿದ್ದಾರೆ. ಇನ್ನು ಈ ಘಟನೆ ರಾಹುಲ್ ಗಾಂಧಿಯವರ ಗಮನಕ್ಕೂ ಬಂದಿದ್ದು ಆಶಾ ಕುಮಾರಿ ನಡೆ ಸರಿಯಿಲ್ಲ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ನಡೆದ ಮೇಲೆ ಆಶಾ ಕುಮಾರಿ ಪೇದೆ ಬಳಿ ಕ್ಷಮೆ ಕೂಡ ಕೇಳಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!